ಚಳ್ಳಕೆರೆ : ಹಿಂದುಳಿದ ಜನಾಂಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದಿವಂಗತ ಎಲ್‌ಜಿ.ಹಾವನೂರವರ ಕೊಡುಗೆ ಅಪಾರವಾದದ್ದು ಎಲ್‌ಜಿ.ಹಾವನೂರುರವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾನೂನು ಮಂತ್ರಿಯಾಗಿ ತುಳಿತಕ್ಕೆ ಒಳಗಾದಂತ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವಂತಹ ಕೆಲಸ ಮಾಡಿ ಸಾಮಾಜಿಕ ನ್ಯಾಯ ಕೊಡಿಸಿದವರಲ್ಲಿ ಕರ್ನಾಟಕಕ್ಕೆ ಮೊದಲನೆಯ ವ್ಯಕ್ತಿಯಾಗಿದ್ದಾರೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ, ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮತ್ತು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಜಿಟಿ.ಚಂದ್ರಶೇಖರಪ್ಪ ಹೇಳಿದರು.
ಅವರು ನಗರದ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದಲ್ಲಿ 1973ರಲ್ಲಿ ಎಲ್‌ಜಿ.ಹಾವನೂರವರ ಸಾಮಾಜಿಕ ಬದಲಾವಣೆಯ ಕನಸುಗಳು ಎಂಬ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿ ಕರ್ನಾಟಕ ಕಂಡAತಹ ಸಾಮಾಜಿಕ ಬದಲಾವಣೆ ಹರಿಕಾರ ಎಲ್‌ಜಿ ಹಾವನನೂರು ಮತ್ತು ಡಿ.ದೇವರಾಜ ಅರಸ್ ರವರು ಸಮಾಜದಲ್ಲಿರುವಂತಹ ಎಲ್ಲ ಜನಾಂಗಗಳ ಬಡವರ ಹೇಳಿಗೆಗಾಗಿ ಶ್ರಮಿಸಿದ ಇವರು ಸಮಾಜದಲ್ಲಿ ಸಾಕಷ್ಟು ಅಪನಿಂದನೆಗೆ ಗುರಿಯಾಗಬೇಕಾಯಿತು ಇವರ ನಿಸ್ವಾರ್ಥದ ಬದುಕು ಇಂದಿನ ರಾಜಕಾರಣಿಗಳಿಗೆ ಆದರ್ಶವಾದುದೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ, ದಿವಂಗತ ಎಲ್‌ಜಿ ಹಾವವನೂರು ಮತ್ತು ಅಂಬೇಡ್ಕರ್ ಅವರ ಪರಿಶ್ರಮದಿಂದ ಸವಲತ್ತು ಪಡೆದಂತ ವ್ಯಕ್ತಿಗಳು ಸಮಾಜಮುಖಿಯಾಗಿ ಕೆಲಸ ಮಾಡದೆ ಸ್ವಾರ್ಥ ಬದುಕನ್ನು ಕಟ್ಟಿಕೊಂಡಿರುವುದು ಅವರ ಮನಸ್ಸಿಗೆ ತುಂಬಾ ದುಃಖವನ್ನುಂಟು ಮಾಡಿದ್ದು ಜೀವಿತದ ಕೊನೆಯವರೆಗೂ ಇಬ್ಬರು ನಾಯಕರು ಪರೀತಪಿಸುತ್ತಿದ್ದರು ಇಡೀ ವ್ಯವಸ್ಥೆಯ ವಿರೋಧ ಮಾಡಿಕೊಂಡು ಹಿಂದುಳಿದ ಅಭಿವೃದ್ಧಿಗೆ ಶ್ರಮಿಸಿದ ಇವರ ಮನಸ್ಥಿತಿ ತುಂಬಾ ಅನನ್ಯ, ಈ ಹಿನ್ನೆಲೆಯಲ್ಲಿ ಈ ವರ್ಗದ ಎಲ್ಲ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವುದು ಔಚಿತ್ಯ ಅವಶ್ಯಕತೆ ಇದೆ ಎಂದು ಹೇಳಿದರು.
ನಿವೃತ್ತ ಎಸಿಪಿ ಪಂಪಾಪತಿ ಮಾತನಾಡಿ, ಎಲ್‌ಜಿ ಹಾವನೂರು ರವರ ಪರಿಶ್ರಮ ಮತ್ತು ವಿದ್ವತ್ತ ಇಡೀ ಸಮಾಜಕ್ಕೆ ದಾರಿ ದೀಪ ಇವರ ಆದರ್ಶಗಳನ್ನು ಇಂದಿನ ಪೀಳಿಗೆಯು ಅಳವಡಿಸಿಕೊಳ್ಳಬೇಕು ಹಾವನೂರು ಅವರ ಬದುಕು ಕನ್ನಡಿ ಯಷ್ಟೇ ಪಾರದರ್ಶಕವಾದದ್ದು ಎಂದು ಹೇಳಿದರು.
ವಾಲ್ಮೀಕಿ ಮಹಾಸಭಾ ನಿರ್ದೇಶಕರುಗಳಾದ ಗುಡ್ಡೆ ಕಾಯಿ, ಗೋಪಾಲಕೃಷ್ಣ, ತುಳಸಿರಾಮ್, ಸಿಂಗಾಪುರವೆAಕಟೇಶ್, ಮಾತನಾಡಿದರು.
ಸಮಾರಂಭದಲ್ಲಿ ನಿವೃತ್ತ ಮುಖ್ಯ ಇಂಜಿನಿಯರ್ ಕೆಂಪುರಾಮಯ್ಯ, ಕೊಂದಾಸ್ಪುರ ರಾಜಪ್ಪ, ಅನಂತಯ್ಯ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!