ಎನ್‍ಸಿಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ
ವಿದ್ಯಾರ್ಥಿ ಜೀವನದಲ್ಲಿ ಎನ್‍ಸಿಸಿ ಭಾಗವಹಿಸಿಕೆ ಬಹಳ ಮುಖ್ಯ
ಚಿತ್ರದುರ್ಗ ಜುಲೈ04:
ವಿದ್ಯಾರ್ಥಿ ಜೀವನದಲ್ಲಿ ಎನ್‍ಸಿಸಿಯಲ್ಲಿ ಭಾಗವಹಿಸುವಿಕೆ ಬಹಳ ಮಹತ್ವವಾದ ಪಾತ್ರವಹಿಸುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನಸಭಾಂಗಣದಲ್ಲಿ ಸೋಮವಾರ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಎನ್‍ಸಿಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಸ್ತಿನ ಸಿಪಾಯಿ ರೀತಿಯಲ್ಲಿ ಎನ್‍ಸಿಸಿ ಕೆಡೆಟ್‍ಗಳು ಇರುವುದನ್ನು ಕಾಣಬಹುದು. ರಾಷ್ಟ್ರದ ನಿರ್ಮಾಣ ಹಾಗೂ ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದು. ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಒಳಗಾಗಬಾರದು. ಎನ್‍ಸಿಸಿ ಕೋಟಾದಡಿ ಕೇಂದ್ರ ಹಾಗೂ ರಾಜ್ಯದಲ್ಲಿ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.
ಎನ್‍ಸಿಸಿ ಅಧಿಕಾರಿ ಲೆಪ್ಟಿನೆಂಟ್ ಡಾ.ಎಸ್.ಆರ್.ಲೇಪಾಕ್ಷ ಮಾತನಾಡಿ, ಸರ್ಕಾರಿ ಕಲಾ ಕಾಲೇಜು ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಿ ಸರ್ಟಿಫಿಕೇಟ್ ಫಲಿತಾಂಶ ಹಾಗೂ ಬಿ ಸರ್ಟಿಫಿಕೇಟ್ ಫಲಿತಾಂಶ ಮತ್ತು ದಾವಣಗೆರೆ ಬಟಾಲಿಯನ್‍ನಲ್ಲಿ ಕಳೆದ ವರ್ಷ ಕಾಲೇಜು ಬೆಸ್ಟ್ ಯುನಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧ್ಯಾರ್ಥಿಗಳಿಗೆ ದೇಶ ಪ್ರೇಮ, ಸಮಾಜ ಸೇವೆ, ನಾಯಕತ್ವ ಹೀಗೆ ಹತ್ತು ಹಲವಾರು ಉಪಯೋಗ ಎನ್‍ಸಿಸಿಯಿಂದ ಆಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಕಾಲೇಜಿಗೆ ಶೇ.100ರಷ್ಟು ಎನ್‍ಸಿಸಿ ಘಟಕದ ಈ ಫಲಿತಾಂಶ ಲಭಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆಯನ್ನು ವಿಧ್ಯಾರ್ಥಿಗಳು ಮಾಡಲಿ ಎಂದು ಆಶಯವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಸುಧಾಕರ್, ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಸುಧಾದೇವಿ, ನ್ಯೂಸ್ 18 ವರದಿಗಾರ ವಿನಾಯಕ, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಪ್ರೊ.ಎಲ್.ನಾಗರಾಜಪ್ಪ, ಪ್ರೊ.ಜಿ.ಡಿ.ಸುರೇಶ್, ವ್ಯವಸ್ಥಾಪಕ ಮಾರ್ಟಿನ್, ಲೆಪ್ಟಿನೆಂಟ್ ದಿನೇಶ್ ಕುಮಾರ್, ಸತೀಶ್ ನಾಯ್ಕ್ ಸೇರಿದಂತೆ ಕೆಡಿಟ್‍ಗಳು ಇದ್ದರು.
?