ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ.05:
ಜುಲೈ 5ರಂದು ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ 32ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಬಬ್ಬೂರು 24.4 ಮಿ.ಮೀ, ಇಕ್ಕನೂರು 25.2 ಮಿ.ಮೀ, ಈಶ್ವರಗೆರೆ 14.2 ಮಿ.ಮೀ, ಸುಗೂರಿನಲ್ಲಿ 11.4 ಮಿ.ಮೀ ಮಳೆಯಾಗಿದೆ
ಹೊಸದುರ್ಗ ತಾಲ್ಲೂಕಿನಲ್ಲಿ ಹೊಸದುರ್ಗದಲ್ಲಿ 1.8 ಮಿ.ಮೀ, ಶ್ರೀರಾಂಪುರ 10 ಮಿ.ಮೀ, ಮಾಡದಕೆರೆಯಲ್ಲಿ 10 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 22.4 ಮಿ. ಮೀ, ಚಿಕ್ಕಜಾಜೂರು 12.5 ಮಿ.ಮೀ, ಬಿ.ದುರ್ಗ 6.2 ಮಿ.ಮೀ, ಹೆಚ್‍ಡಿ ಪುರ 7.4 ಮಿ.ಮೀ, ತಾಳ್ಯದಲ್ಲಿ 2.4 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1 ರಲ್ಲಿ 5.6 ಮಿ.ಮೀ, ಚಿತ್ರದುರ್ಗ-2ರಲ್ಲಿ 4.4 ಮಿ.ಮೀ, ಸಿರಿಗೆರೆ 7 ಮಿ.ಮೀ, ತುರುವನೂರು 1.6 ಮಿ.ಮೀ, ಐನಹಳ್ಳಿ 3.4 ಮಿ.ಮೀ, ಹಿರೇಗೂಂಟನೂರು 2 ಮಿ.ಮೀ, ಭರಮಸಾಗರದಲ್ಲಿ 6 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 6.6 ಮಿ.ಮೀ, ನಾಯಕನಹಟ್ಟಿ 22.4 ಮಿ.ಮೀ, ತಳಕು 14.4ಮಿ.ಮೀ, ಡಿ.ಮರಿಕುಂಟೆ 13.4 ಮಿ.ಮೀ, ಪರುಶುರಾಂಪುರದಲ್ಲಿ 18.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Namma Challakere Local News
error: Content is protected !!