ರುಡ್ ಸೆಟ್ ಸಂಸ್ಥೆ, ಕೆಳಗೋಟೆ, ಹೌಸಿಂಗ್ ಬೋರ್ಡ್ ಕಾಲೋನಿ, ಚಿತ್ರದುರ್ಗ ಇವರು ಇದೇ ಇದೇ ಜುಲೈ ತಿಂಗಳ 3ನೇ ವಾರದಲ್ಲಿ ಒಂದು ತಿಂಗಳ ಉಚಿತ ಸೆಲ್ ಪೋನ್ ಗಳ ರಿಪೇರಿ ತರಬೇತಿಯನ್ನು 18 ರಿಂದ 45 ರ ವಯೋಮಿತಿಯಲ್ಲಿನ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಸಂಸ್ಥೆಯಲ್ಲಿ ಆಯೋಜಿಸಿದ್ದಾರೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್, ಬಿಪಿಎಲ್ ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ದಾಖಲಾತಿಗಳೊಂದಿಗೆ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಸಂಸ್ಥೆಯಲ್ಲಿ ದಿನಾಂಕ 14.07.2023  ರಂದು ಬೆಳಿಗ್ಗೆ 10.30 ಕ್ಕೆ  ಸಂದರ್ಶನ ಏರ್ಪಡಿಸಲಾಗಿದ್ದು, ಆಸಕ್ತರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ : 9481778047, 9019299901,8660627785, 8618282445 ಅನ್ನು ಸಂಪರ್ಕಿಸಬಹುದಾಗಿದೆ

About The Author

Namma Challakere Local News
error: Content is protected !!