ರಾಜ್ಯಾದ್ಯಾಂತ ಮುಸ್ಲಿಂ ಬಾಂಧವರು ಆಚರಿಸುವ ಬಕ್ರಿದ್ ಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಮುಸ್ಲಿಂ ಬಾಂಧವರು ಮಳೆಗಾಗಿ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ
ಈಡೀ ದೇಶಾದ್ಯಾಂತ ಮುಸ್ಲಿಂ ಸಮುದಾಯದವರು ಆಚರಿಸುವ ಬಕ್ರಿದ್ ಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಿದ್ದಾರೆ.
ಈ ಬಾರಿ ಬಕ್ರಿದ್ ಪ್ರಯುಕ್ತ ಅಲ್ಲಾನಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುರುವುದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಕಾಣಬಹುದು
ನಾಡಿನ ಸಮಸ್ತ ಜನತೆಯ ಪರವಾಗಿ ಮುಸ್ಲಿಂ ಬಾಂಧವರಿAದ ಮಳೆರಾಯನ ಆಗಮನಕ್ಕೆ ಮಸೂದಿಯಲ್ಲಿ ವಿಶೇಷ ಪ್ರಾರ್ಥನೆ
ಜಾಮಿಯಾ ಮಸೂದಿ ಗುರುಗಳಾದ ಮುಕ್ತಿ ಮೊಹಮ್ಮದ್ ಸೊಹೇಬ್ ರವರಿಂದ ಪ್ರಾರ್ಥನೆ
ನಾಯಕನಹಟ್ಟಿ ಪಟ್ಟಣದ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯನ್ನು ಮಾಡುವ
ಮೂಲಕ ಸಂಭ್ರಮ ಸಡಗರದಿಂದ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಪ್ರವಾದಿ ಹಜರತ್ ಇಬ್ರಾಹಿಂ ತ್ಯಾಗ ಬಲಿದಾನ ಅಚಲ ದೈವಭಕ್ತಿಯನ್ನು ಅವರ ಪುತ್ರ ಹಜರತ್ ಇಸ್ಮೈಲ್ ದೈವಭಕ್ತಿಯನ್ನು ಸಾಕ್ಷಿಕರಿಸುವ ಪವಿತ್ರ ಬಕ್ರೀದ್ ಹಬ್ಬವಾಗಿದೆ ಎಂದಿದ್ದಾರೆ.
ಪಟ್ಟಣದ ಹಳೆಯ ಜಾಮೀಯ ಮಸೂದಿ ಇಂದ ಕಾಲ್ನಡಿಗೆಯಲ್ಲಿ ಆಗಮಿಸಿದ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ಇನ್ನೂ ಜಾಮಿಯಾ ಮಸೂದಿ ಅಧ್ಯಕ್ಷ ಸೈಯದ್ ಅನ್ವರ್ ಮಾತನಾಡಿ ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಮಳೆರಾಯನ ಆಗಮನಕ್ಕೆ ನಮ್ಮ ಮಸೂದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ ಎಂದರು.

ಇದೇ ವೇಳೆ ಜಾಮೀಯ ಮಸೂದಿಯ ಕಮಿಟಿಯ ಸರ್ವ ಸದಸ್ಯರು ಹೋಬಳಿಯ ಸಮಸ್ತ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

Namma Challakere Local News
error: Content is protected !!