ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಭಾಂದವರು.
ಚಳ್ಳಕೆರೆ : ಈದ್ಗಾ ಮೈದಾದಲ್ಲಿ ಮುಸ್ಲೀಂ ಸಮುದಾಯ ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ನಂತರ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ವಿವಿಧ ಮಸೀದಿಗಳಲ್ಲಿ ಬೆಳಿಗ್ಗೆಯಿಂದಲೆ ಪ್ರಾರ್ಥನೆ ಸಲ್ಲಿಸಿ ನಂತರ ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಇದೇ ಸಂಧರ್ಭದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ತ್ಯಾಗ ಬಲಿದಾನ, ಶಾಂತಿ ಸೌಹಾರ್ದತೆಗಳ ಹಬ್ಬವಾದ ಬಕ್ರೀದ್ ಹಬ್ಬವನ್ನು ಆಚರಿಸುವ ಮೂಲಕ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಎಸ್.ಮಹಮ್ಮದ್‌ಸಾಬ್, ಉಪಾಧ್ಯಕ್ಷ ಸೈಯಾದ್ ಆಶ್ರಫ್, ವಿ.ಇರ್ಷಾದ್ ಆಹಮ್ಮದ್, ಹಾಜಿಅತೀಕ್‌ರೆಹಮಾನ್, ತೌಸಿಫ್, ದಾದಾಪೀರ್, ರಷೀದ್ ಸಾಬ್,ಕೆ.ರಿಜ್ವಾನ್, ಸಾಧಿಖುಲಾ, ಮುಜೀಬ್, ಲ್ಯಾಬ್‌ಭಾಷ,
ಇತರರಿದ್ದರು.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು ಡಿವೈಎಸ್‌ಪಿ ರಮೇಶ್ ಕುಮಾರ್ , ಸಿಪಿಐ ಸಮ್ಮಿವುಲ್ಲಾ, ಪಿಎಸ್‌ಐ ಸತೀಶ್‌ನಾಯ್ಕ, ಬಸವರಾಜ್, ಇತರರಿದ್ದರು.