ಚಳ್ಳಕೆರೆ : ತಾಲೂಕಿನ ಪಿಲ್ಲಹಳ್ಳಿ ಗ್ರಾಮದ ಪ್ರಗತಿಪರ ರೈತ, ಹೋರಾಟಗಾರ ಸಂಸ್ಕೃತಿ ಚಿಂತಕ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಅವರಿಗೆ ಬೆಂಗಳೂರಿನ ಸರ್ವೇಜನಾ ಆರ್ಟ್ಸ್ ಮತ್ತು ಕಲ್ಚರಲ್ ಟ್ರಸ್ಟ್ (ರಿ) ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃಧ್ದಿ ಪ್ರಾಧಿಕಾರ ಬೆಂಗಳೂರು ಇವರ ವತಿಯಿಂದ ಕೃಷಿ ಸೇರಿದಂತೆ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರತಿಭಾವಂತರನ್ನು ಪ್ರತೀ ವರ್ಷದಂತೆ ಈ ಬಾರಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿಯ ಪಿಲ್ಲಹಳ್ಳಿ ಗ್ರಾಮದ ಪಿಲ್ಲಹಳ್ಳಿ ಸಿ ಚಿತ್ರಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ನ ಸಂಸ್ಥಾಪಿತ ಅಧ್ಯಕ್ಷೆ ಲಕ್ಷಿತಾಗಂಗಾವತಿ ತಿಳಿಸಿದ್ದಾರೆ
ಜೂ 25 ರಂದು ಬಳ್ಳಾರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಡಿನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಸಂಸ್ಥೆಯ ಗೌರವಾಧ್ಯಕ್ಷ ಕೆಂಚನೂರು ಶಂಕರಪ್ಪ, ಗೌರವಾಧ್ಯಕ್ಷೆ ಲಕ್ಷಿತಾ ಗಂಗಾವತಿ ಪ್ರಶಸ್ತಿ ಪುರಸ್ಕೃತರಾದ ಚಿತ್ರಲಿಂಗಪ್ಪ ಮತ್ತಿತರರು ಇದ್ದರು