ಚಳ್ಳಕೆರೆ : ಈಡೀ ರಾಜ್ಯದಲ್ಲಿ ಜೈನ ಸಮುದಾಯದ ಬೆರಳೆಣಿಕೆಯಷ್ಟು ಇರಬಹುದು ಆದರೆ ಆ ಸಮುದಾಯದ ಶಕ್ತಿ ಎಷ್ಠಿದೆ ಎಂಬುದು ಕಳೆದ 2008 ರಿಂದ ಈಗೀನ ನೂತನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯದ ಏಕೈಕ ಮಂತ್ರಿಯನ್ನಾಗಿ ಮಾಡಿದ ಸಮಯದಾಯ ಎಂಬ ಹೆಗ್ಗಳಿಕೆ ಕೂಡ ಈ ಸಮುದಾಯಕ್ಕೆ ಇದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಹಾಗೂ ಜಿಲ್ಲಾ ಉಸ್ತೂವಾರಿ ಮಂತ್ರಿಗಳಾದ ಡಿ ಸುಧಾಕರ್ ಹೇಳಿದರು.
ಅವರು ನಗರದ ಜೈನ ಭವನದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಸಮಾಜ ಹಾಗೂ ಶ್ರೀ ಮಹಾವೀರ ಜೈನ ಶ್ವೇತಾಂಬರ ಮೂರ್ತಿ ಪೂಜೆ ಹಾಗೂ ನೂತನವಾಗಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ ಸುಧಾಕರ್ ರವರಿಗೆ ಹಾಗೂ 3ನೇ ಭಾರಿಗೆ ಶಾಸಕರಾಗಿ ಆಯ್ಕೆಯಾದ ಟಿ ರಘುಮೂರ್ತಿ ರವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜೈನ ಸಮುದಾಯ ಚಳ್ಳಕೆರೆಯಲ್ಲಿ ಕಡಿಮೆ ಇರಹುವುದು ಆದರೆ ಅವರ ಶಕ್ತಿ ಎಷ್ಟಿದೆ ಎಂಬುದು ಇಲ್ಲಿ ಗೋಷರಿಸುತ್ತದೆ ಚಳ್ಳಕೆರೆಯಲ್ಲಿ ಹಾಗೂ ಹಿರಿಯೂರಿನಲ್ಲಿ ಶಾಸಕ ಹಾಗೂ ಸಚಿವರಾಗಿ ಇಂದು ನಿಮ್ಮ ಮುಂದೆ ಎರಡನೇ ಬಾರಿಗೆ ಸಚಿವರಾಗಿ ನಿಂತಿದ್ದೆನೆ ಎಲ್ಲಾ ಸಮುದಾಯಗಳಿಗೆ ನ್ಯಾಯ ಹೊದಗಿಸುವಂತ ಕೆಲಸ ಮಾಡುತ್ತೆನೆ ಎಂದರು.
ಇನ್ನೂ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಜೈನ ಸಮುದಾಯ ಎಷ್ಟಿದೆ ಎಂಬುದು ಮುಖ್ಯವಲ್ಲ ಆ ಸಮುದಾಯದ ಶಕ್ತಿ ಹಾಗು ಶಾಂತಿ ಒಗ್ಗಟ್ಟ ಮಾತ್ರ ನಾವು ನೋಡಬೇಕಿದೆ ಕಳೆದ ಎರಡು ಬಾರಿ ಸಚಿವರನ್ನು ಕೊಟ್ಟ ಸಮಾಜ ಎಂದರೆ ಅದು ಜೈನ ಸಮುದಾಯ , ಪ್ರಸ್ತುತ ರಾಜ್ಯಸರ್ಕಾರದ ಮಂತ್ರಿ ರೇಸ್ ನಲ್ಲಿನಾನು ಕೂಡ ಇದ್ದೆ ಆದರೆ ನಾಯಕ ಸಮುದಾಯದಲ್ಲಿ ತುಂಬಾ ಸೀನಿಯರ್ ಇರುವುದರಿಂದ ನನಗೆ ಅವಕಾಶ ಸಿಗಲಿಲ್ಲ ಆದರೆ ಚಳ್ಳಕೆರೆ ವಾಸಿಯಾದ ಅಣ್ಣಾ ಸುಧಾಕರ್ ವರವಿಗೆ ಜೈನ್ ಕೋಟ ಹಾಗು ಹಿರಿತನದ ಆಧಾರ ಮೇಲೆ ಮಂತ್ರಿ ಗಿರಿ ಲಭಿಸಿದೆ ಆದರೆ ಇವರು ನಾವು ಸೇರಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೆವೆ ಎಂದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ್, ಭರತ್ ಕುಮಾರ್ ಜೈನ್, ಅಂಬಣ್ಣ ಜೈನ್, ಚಂಪಾಲಾಲ್ ಜೈನ್, ಹಾಗೂ ಮುಖಂಡರು , ಕಾರ್ಯಕರ್ತರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.