**
ಚಿತ್ರದುರ್ಗ
ಜೂನ್.17:
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ, ಕ್ಷೇತ್ರಿಯ ಕಚೇರಿ ಬಳ್ಳಾರಿಯು “ನಿಧಿ ಆಪ್ಕೆ ನಿಕಟ್: ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ” ಕಾರ್ಯಕ್ರಮದ ವಿಸ್ತ್ರತ ಮತ್ತು ಬಲಪಡಿಸಿದ ಆವೃತ್ತಿಯನ್ನು ಇದೇ ಜೂನ್ 27ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಟಿ.ಎಮ್.ಸಿ ಮೀಟಿಂಗ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಕಾರ್ಮಿಕರ, ಪಿಂಚಣಿದಾರರ ಮತ್ತು ಉದ್ಯೋಗದಾತರ ಕುಂದುಕೊರತೆ ಪರಿಹಾರ ಮತ್ತು ಮಾಹಿತಿ ವಿನಿಮಯಕ್ಕೆ ವಿಶಾಲ ವೇದಿಕೆಯಾಗಿ, ಅರಿವು ಮೂಡಿಸುವ ಮತ್ತು ಪ್ರಭಾವ ಬೀರುವ ಕಾರ್ಯಾಕ್ರಮವಾಗಿದೆ.
ಉದ್ಯೋಗದಾತರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಅರಿವು, ಕಾರ್ಮಿಕರಿಗೆ, ಉದ್ಯೋಗದಾತರಿಗೆ, ಪ್ರಧಾನ ಉದ್ಯೋಗದಾತರಿಗೆ ಮತ್ತು ಗುತ್ತಿಗೆದಾರರಿಗೆ ಲಬ್ಯವಿರುವ ಆನ್‍ಲೈನ್ ಸೇವೆಗಳ ಮಾಹಿತಿ, ಹೊಸ ಉಪಕ್ರಮಗಳು, ಸುಧಾರಣೆಗಳ ಮಾಹಿತಿ ಒದಗಿಸುವುದು ಕೂಡ ಕಾರ್ಯಕ್ರಮದ ಭಾಗವಾಗಿದೆ.
ಎಲ್ಲಾ ಕಾರ್ಮಿಕರು, ಪಿಂಚಣಿದಾರರು, ಉದ್ಯೋಗದಾತರು “ನಿಧಿ ಆಪ್ಕೆ ನಿಕಟ್: ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ “ ಕಾರ್ಯಕ್ರಮಕ್ಕೆ ಹಾಜರಾಗಿ ಪ್ರಯೋಜನ ಪಡೆಯಬೇಕು ಎಂದು ಬಳ್ಳಾರಿ ಕ್ಷೇತ್ರಿಯ ಕಚೇರಿಯ ಉಪಕ್ಷೇತ್ರಿಯ ಭವಿಷ್ಯ ನಿಧಿ ಆಯುಕ್ತ ಟಿ.ಎನ್.ನಂದನ್ ಸಿಂಗ್ ತಿಳಿಸಿದ್ದಾರೆ.

About The Author

Namma Challakere Local News
error: Content is protected !!