2023-24ನೇ ಸಾಲಿನ ಮುಂಗಾರು ಹಂಗಾಮು ಶೇಂಗಾ ಬಿತ್ತನೆ ಬೀಜ ವಿತರಣೆ : ಕೃಷಿ ಅಧಿಕಾರಿ ಜೀವನ್ ಕರೆ

ಚಳ್ಳಕೆರೆ : 2023 -24ನೇ ಸಾಲಿನ ಮುಂಗಾರು ಹಂಗಾಮು ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತದೆ ಆದ್ದರಿಂದ ರೈತರು ಕೃಷಿ ಇಲಾಖೆ ನಿಗಧಿ ಪಡಿಸಿದ ದಿನಾಂಕದAದು ಬಿತ್ತನೆ ಶೇಂಗಾ ಪಡೆಯಬೇಕು ಎಂದು ಕೃಷಿ ಅಧಿಕಾರಿ ಜೀವನ್ ಕರೆ ನೀಡಿದ್ದಾರೆ.
ಪರುಶುರಾಂಪುರ ಭಾಗದ ಎಲ್ಲಾ ಅರ್ಹ ರೈತ ಫಲಾನುಭವಿಗಳು ಮುಂಗಾರು ಬಿತ್ತನೆ ಹಂಗಾಮಿನಲ್ಲಿ ಬಿತ್ತನೆ ಬೀಜಗಳನ್ನು ಪಡೆಯುವ ಸಲುವಾಗಿ ಮಧ್ಯವರ್ತಿಗಳ ಹವಾಳಿ ತಪ್ಪಿಸಿ ನೇರವಾಗಿ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂರ್ಪರ್ಕಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನೂ ರೈತರು ಬಿತ್ತನೆ ಬೀಜಕ್ಕಾಗಿ ಕೃಷಿ ಇಲಾಖೆ ನಿಗಧಿ ಪಡಿಸಿದ ಮೂಲ ದಾಖಲಾತಿಗಳನ್ನು ನೀಡಿ ಬಿತ್ತನೆ ಬೀಜ ಪಡೆಯಬಹುದು ಎಂದು ಹೇಳಿದ್ದಾರೆ.

About The Author

Namma Challakere Local News
error: Content is protected !!