ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದAತಹ ಕಾಂಗ್ರೆಸ್ ಸರ್ಕಾರ ಒತ್ತುವರಿಯಾಗಿರುವಂತಹ ಸರ್ಕಾರಿ ಸ್ವತ್ತುಗಳಾದ ಗೋಮಾಳ ರಾಜಾ ಕಾಲುವೆ, ಕೆರೆಕುಂಟೆ ಮುಂತಾದವುಗಳನ್ನು ನಿದ್ರಾಕ್ಷಿಣ್ಯವಾಗಿ ಭೂಗಳ್ಳರಿಂದ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಈಗಾಗಲೇ ಉಪಮುಖ್ಯಮಂತ್ರಿಗಳಾದ ಡಿಕೆ.ಶಿವಕುಮಾರ್ ಜೂನ್ 8ರಂದು ಬೆಂಗಳೂರು ಇಡೀ ನಗರವನ್ನು ಸುತ್ತುವರೆದು ಎಲ್ಲೆಲ್ಲಿ ಒತ್ತುವರಿಯಾಗಿದೆ ಅಂತ ಜಾಗವನ್ನು ಪರಿಶೀಲಿಸಿದ್ದಾರೆ.
ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ಕೂಡ ನೀಡಿದ್ದಾರೆ ಆದರೆ ಚಳ್ಳಕೆರೆ ನಗರದಲ್ಲಿ ಇದಕ್ಕೆ ವಿರುದ್ಧವಾದ ಪ್ರಕರಣ ಒಂದು ನಡೆದಿದೆ ಚಳ್ಳಕೆರೆ ನಗರದ ಹೃದಯ ಭಾಗದಲ್ಲಿರುವಂತ ಹತ್ತಾರು ಕೋಟಿ ಬೆಳೆಬಾಳುವಂತ ಸರ್ಕಾರಿ ಬಿ.ಖರಾಬು ಜಮೀನನ್ನು ಸೈಟ್ ಗಳನ್ನಾಗಿ ವಿಂಗಡಿಸಿಕೊAಡು ಮಾರಾಟ ಮಾಡಲು ಅವಣಿಸುತ್ತಿರುವಾಗ ಇಂತಹ ಬಿ ಕರಾಬು ಜಮೀನನ್ನು ಉಳಿಸಿಕೊಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು ಜಿಲ್ಲಾಧಿಕಾರಿಯವರು ಕೂಡ ಈ ಬಗ್ಗೆ ಒತ್ತುವರಿ ಜಮೀನನ್ನು ತೆರವುಗೊಳಿಸುವಂತೆ ತಹಸಿಲ್ದಾರ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದರು ಕೂಡ ಕಂದಾಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ಹಲವು ಅನುಮಾನಗಳಿಗೆ ಅಸ್ಪಾಧ ನೀಡಿದಂತಾಗಿದೆ.
ಇನ್ನೂ ಹತ್ತಾರು ಕೋಟಿ ಬೆಳೆಬಾಳುವಂತಹ ಈ ಬಿ ಕರಬು ಭೂಮಿಯನ್ನು ತೆರವುಗೊಳಿಸದೆ ಇರುವುದು ನಿಜಕ್ಕೂ ಶೋಚನೀಯ ಸಂಗತಿ.
ಕಸಬಾ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂಬರ್ 241, 243, 245, 246, ಹಾಗೂ 249 ರ ಸರ್ಕಾರಿ ಜಮೀನಿನನ್ನು ಬಡವಾಣೆಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳು, ಸರ್ಕಾರ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆಯಿಂದ ಪತ್ರ ರವಾನೆಯಾಗಿದೆ ಆದರೆ ದಿನಾಂಕ 12-12-2022ರಂದು ಪತ್ರ ರವಾನೆಯಾದರೂ ಕೂಡ ಇಲ್ಲಿಯ ತನಕ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದೊಂದು ಬೆಳಕಿಗೆ ಬಂದಿರುವAತ ಪ್ರಕರಣ ಅಷ್ಟೇ ನಗರ ಪ್ರದೇಶದಲ್ಲಿ ಇಂತಹ ಇನ್ನೂ ನೂರಾರು ಪ್ರಕರಣಗಳಿದ್ದು ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸದೆ ನಿರ್ಲಕ್ಷ ತೋರಿರುವುದು ಜಿಲ್ಲಾಧಿಕಾರಿಗಳ ಪತ್ರಕ್ಕೂ ಕವಡೆ ಕಿಮ್ಮತ್ತು ಕೊಡದೆ ಸಾರ್ವಜನಿಕರ ಸ್ವತ್ತನ್ನು ಉಳಿಸಲು ಉದಾಸಿನ ತೋರಿರುವವರ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ವಹಿಸದಿರುವ ಬಗ್ಗೆ ನಗರದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಕ್ಸ್ :

  1. ನಗರದಲ್ಲಿ ಇಷ್ಟು ದೊಟ್ಟ ಮಟ್ಟಕ್ಕೆ ಸರಕಾರಿ ಭೂಮಿ ಕಬಳಿಕೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಆದರೆ ಚುನಾವಣೆ ನಿಮ್ಮಿತ ಬಂದಿದ್ದರಿAದ ಚುನಾವಣೆ ಕೆಲಸದಲ್ಲಿ ನಿರತರಾಗಿದ್ದೆವೆ ಕಛೇರಿಯಲ್ಲಿ ಪತ್ರ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೆನೆ…
    –ರೇಹಾನ್ ಪಾಷ, ತಹಶೀಲ್ದಾರ್ ಚಳ್ಳಕೆರೆ

2.ನಗರದ ಮಧ್ಯೆ ಭಾಗದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟಿರುವಂತ ಬಿ.ಖರಾಬ್ ಜಮೀನನ್ನು ಭೂಗಳ್ಳರು ಅಕ್ರಮವಾಗಿ ಉಪಯೋಗಿಸುವ ಮುಲಕ ಸರಕಾರಕ್ಕೆ ಮಂಕುಬೂದಿ ಎರಚುತ್ತಿದ್ದಾರೆ, ಇದರಲ್ಲೆ ಅಕ್ರಮ ಕಟ್ಟಡಗಳು, ಲೇಔಟ್‌ಗಳು ಈಗೇ ರಾಜರೋಷವಾಗಿ ಸರಕಾರಿ ಭೂಮಿಯಲ್ಲಿ ಚಟುವಟಿಕೆ ನಡೆಸಿದರೂ ಖ್ಯಾರೆ ಎನ್ನದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ..
–ಕೆ.ಪಿ.ಭೂತಯ್ಯ. ರಾಜ್ಯ ರೈತ ಸಂಘ ಉಪಾಧ್ಯಕ್ಷ

3.ತಾಲೂಕಿನಲ್ಲಿ ಸುಮಾರು 27ಎಕರೆ ಭೂಮಿಯನ್ನು ಅಧಿಕಾರಿಗಳು ಈ ಕೂಡಲೇ ಬಿಡಿಸಿ ಸರಕಾರದ ಸುಪರ್ಧಿಗೆ ಪಡೆಯಬೇಕು ಎಂಬುದು ಕಳೆದ ವರ್ಷ 2022ರಲ್ಲಿ ಜಿಲ್ಲಾಧಿಕಾರಿಗಳು ಸುತ್ತೊಲೆ ಹೊರಡಿಸಿದ್ದಾರೆ ಆದರೆ ಇಲ್ಲಿನ ಕಂದಾಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಇರುವುದು ಪ್ರಬಾವಿಗಳ ಹಣತೆಯಂತೆ ನಡೆದುಕೊಳ್ಳುವುದು ಕಂಡು ಬರುತ್ತಿದೆ. ಈಗೇ ನಗರದಲ್ಲಿ ಸರಕಾರಿ ಭೂಮಿ ಉಳಿವಿಗಾಗಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸಲಾಗುವುದು.
— ಪಿ.ಮಂಜುನಾಥ್ ಕನ್ನಡ ರಕ್ಷಣಾ ವೇಧಿಕೆ (ಪ್ರವೀಣ್ ಶೆಟ್ಟಿ ಬಣ)

4.ನಗರದ ಸುತ್ತಲು ಐದು ಕಿಮೀ. ವ್ಯಾಪ್ತಿಯಲ್ಲಿ ಸುಮಾರು 27 ಎಕರೆ ಭೂಮಿ ಉಳಿವಿಗಾಗಿ ಸಾರ್ವಜನಿಕರು ಮನವಿ ಕೋರಿದರು ಕೂಡ ಯಾವುದೇ ಪ್ರಗತಿ ಕಾಣುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ನಗರ ಮಧ್ಯೆದಲ್ಲಿ ಇರುವ ಕೋಟಿ ಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ಕೆಲವು ಭೂಗಳ್ಳ ದಂಧೆ ಕೋರರು ಇಂತಹ ಭೂಮಿಯನ್ನು ಪಡೆದು ಇದರಲ್ಲಿ ಅಕ್ರಮ ಕಟ್ಟಡ, ಹಾಗೂ ಲೇಔಟ್ ಮಾಡುವುದರ ಮೂಲಕ ಸರಕಾರಕ್ಕೆ ಕೋಟಿ ಗಟ್ಟಲೆ ವಂಚಿಸುತ್ತಿದ್ದಾರೆ ಇದರಿಂದ ಕಂದಾಯ ಅಧಿಕಾರಿಗಳು ಸರ್ವೆ ನಕ್ಷೆ ಮೂಲಕ ಸರಕಾರದ ಆಸ್ತಿಯನ್ನು ಮರುವಶಕ್ಕೆ ಪಡೆಯಬೇಕು ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು.
—ರೆಡ್ಡಿಹಳ್ಳಿ ವೀರಣ್ಣ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ

Namma Challakere Local News
error: Content is protected !!