ಚಿತ್ರದುರ್ಗದ ಸಮೀಪದ ಬೆಟ್ಟದನಾಗೇನಹಳ್ಳಿಯಲ್ಲಿ ಜೂನ್ 8 ರಿಂದ 14ರವರೆಗೆ ಎಸ್.ಜೆ.ಎಂ. ಕಾಲೇಜು ಚಂದ್ರವಳ್ಳಿ, ದಾವಣಗೆರೆ ವಿಶ್ವವಿದ್ಯಾಲಯ ಎನ್.ಎಸ್.ಎಸ್. ಘಟಕ ಹಾಗು ಬೆಟ್ಟದನಾಗೇನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಲಾಗಿರುವ ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ಮುಖ್ಯಅತಿಥಿಗಳಾಗಿ ಡಾ. ಕೆ.ಸಿ. ರಮೇಶ್ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಸೇವೆಯ ಮೂಲಕ ರಾಷ್ಟçನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡAತಹ ಅನುಭವವನ್ನು ನೀಡುವುದು ಮತ್ತು ದೇಶಪ್ರೇಮ ಹಾಗೂ ಸೇವಾ ಭಾವನೆಗಳನ್ನು ಬೆಳೆಸುವುದೇ ಎನ್.ಎಸ್.ಎಸ್. ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಉಪಪ್ರಾಚಾರ್ಯ ಎಸ್.ಕೆ. ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಶಿಬಿರದ ಉದ್ದೇಶ ಮತ್ತು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು.
ಭೀಮಸಮುದ್ರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಬಿ.ಕೆ. ಕಾವ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಶ್ರೀಮತಿ ಕೆ.ಎಸ್. ಸಿಂಧುಕುಮಾರಿ, ಶ್ರೀಮತಿ ಸಿ.ಎಂ. ಸಿದ್ಧಗಂಗಮ್ಮ, ಪ್ರಕಾಶ್ ಎನ್., ಸಹಪ್ರಾಧ್ಯಾಪಕರಾದ ಪ್ರೊ. ಎಲ್. ಶ್ರೀನಿವಾಸ್, ಪ್ರೊ. ಸಿ.ಎನ್. ವೆಂಕಟೇಶ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ವತಿಯಿಂದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಯಿತು.
ಸಹಪ್ರಾಧ್ಯಾಪಕ ಡಾ. ಬಿ. ರೇವಣ್ಣ ಸ್ವಾಗತಿಸಿದರು. ಪ್ರೊ. ಬಿ. ನಾಗರಾಜ ವಂದಿಸಿದರು. ಕಾಂತರಾಜ್ ನಿರೂಪಿಸಿದರು.

Namma Challakere Local News
error: Content is protected !!