ಪರಶುರಾಮಪುರ ಗ್ರಾಮದ ಉಪ್ಪಾರ ಸಮಾಜ ಹಾಗೂ ಶ್ರೀ ಭಗೀರಥ ಯುವಕ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀ ಭಗೀರಥ ಮಹರ್ಷಿಯ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಗೆ ಹೊಸದುರ್ಗ ಭಗೀರಥ ಮಠದ ಪೀಠಾಧ್ಯಕ್ಷ ಡಾ ಶ್ರೀ ಶ್ರೀ ಶ್ರೀ ಪರುಷೋತ್ತಮಾನಂದಪುರಿಸ್ವಾಮೀಜಿ ಚಾಲನೆ ನೀಡಿ ಮಾತನಾಡಿದರು
ಭಾರತೀಯ ಸಂಸ್ಕೃತಿಯಲ್ಲಿ ಸಂತ-ಶರಣ, ದಾರ್ಶನಿಕರು ನಿಸ್ವಾರ್ಥ ಸೇವೆ ಸಲ್ಲಿಸಿ ಮನುಕುಲಕ್ಕೆ ಆದರ್ಶಗಳನ್ನು ನೀಡಿದ್ದಾರೆ ಎಂದು ಹೊಸದುರ್ಗ ಭಗೀರಥ ಮಠದ ಪೀಠಾಧ್ಯಕ್ಷ ಡಾ ಶ್ರೀ ಶ್ರೀ ಶ್ರೀ ಪರುಷೋತ್ತಮಾನಂದಪುರಿಸ್ವಾಮೀಜಿ ತಿಳಿಸಿದರು.
ಉಪ್ಪಾರ ಸಮಾಜದ ಚಿತ್ರದುರ್ಗ ಜಿಲ್ಲಾ ಮಾಜಿ ಅಧ್ಯಕ್ಷ ಆರ್, ಪಿಆರ್‌ಪುರ ಗ್ರಾಪಂ ಅಧ್ಯಕ್ಷೆ ಅನಿತಾವೆಂಕಟೇಶ, ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅನಿತಾವೆಂಕಟೇಶ, ಡಿಎಸ್‌ಹಳ್ಳಿ ಗ್ರಾಪಂ ಅಧ್ಯಕ್ಷ ರಾಜು, ಜಿಲ್ಲಾ ಉಪ್ಪಾರ ಸಮಾಜದ ಮಾಜಿ ಅಧ್ಯಕ್ಷ ಆರ್ ಮೂರ್ತಿ ತಾಲೂಕಾಧ್ಯಕ್ಷ ಹನುಮಂತಪ್ಪ, ತಾಲೂಕು ಯುವಸಂಘಟನೆಯ ಅಧ್ಯಕ್ಷ ಡಿ ಎಂ ರವಿ, ಮೊಳಕಾಲ್ಮೂರು ತಾಲೂಕಾಧ್ಯಕ್ಷ ನಾಗರಾಜು, ಉಪ್ಪಾರ ಸಮಾಜದ ಮುಖಂಡರು, ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಉಪ್ಪಾರ ಸಮಾಜದ ಮುಖಂಡರು ಭಗೀರಥ ಯುವಕ ಸಂಘದ ಯುವಕರು ಇದ್ದರು.

About The Author

Namma Challakere Local News
error: Content is protected !!