ಚಳ್ಳಕೆರೆ ; ರಾಜ್ಯಾದ್ಯಾಂತ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜಾಕೀಲಯ ಪಕ್ಷಗಳ ನಾಯಕರುಗಳು ಗ್ರಾಮಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ
ಅದರಂತೆ ಇನ್ನೂ ಮೀಸಲಾತಿ ಘೋಷಣೆ ಹಾಗೂ ಕ್ಷೇತ್ರ ವಿಂಗಡಣೆಯ ಮತದಾರರ ಪಟ್ಟಿ ಈಗೇ ಚುನಾವಣೆ ಆಯೋಗ ಕೂಡ ತಯಾರಿ ನಡೆಸುತ್ತಿದೆ.
ಇದರ ಬೆನ್ನಲೆ ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳಲ್ಲಿ ಈಗಾಗಲೇ ಕಳೆದ 2020ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಧಿ ಮುಗಿದಿದ್ದರಿಂದ ಎರೆಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾದ್ಯಕ್ಷ ಆಯ್ಕೆಗೆ ಮೀಸಲಾತಿ ಪ್ರಕಟಿಸಲು ಚುನಾವಣೆ ಆಯೋಗ ಈದೇ ಜೂನ್ ತಿಂಗಳ 19 ಹಾಗೂ 20,21 ರಂದು ಮೂರು ದಿನಗಳ ಕಾಲ ಎರಡು ತಾಲೂಕುಗಳಂತೆ ಸಭೆ ನಡೆಸಲು ಅಧಿಸೂಚನೆ ಕೂಡ ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.
ಇನ್ನೂ ಚಳ್ಳಕೆರೆ ತಾಲೂಕಿನ 40 ಗ್ರಾಮ ಪಂಚಾಯಿತಿಗಳ 2ನೇ ಅವಧಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಡಿಸಲಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.
ನಗರದ ರಾಘವೇಂದ್ರ ಕಲ್ಯಾಣ ಮಂಟದಲ್ಲಿ ಜೂ 19 ರ ಸೋಮವಾರ ಮಧ್ಯಹ್ನಾನ 3 ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ದೀವ್ಯ ಪ್ರಭು ಆಧ್ಯಕ್ಷತೆಯಲ್ಲಿ ನಡೆಯಲಿದ್ದು ಎಲ್ಲಾ ಗ್ರಾಪಂ ಸದಸ್ಯರು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಿಯಾಗುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

About The Author

Namma Challakere Local News
error: Content is protected !!