ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸಂಪುಟ ಪೂರ್ಣಗೊಂಡಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ಸಭೆ ನಂತರ ಸಂಪುಟ ವಿಸ್ತರಣೆ ಯಶಸ್ವಿಯಾಗಿದೆ.
ಇಂದು 24 ಶಾಸಕರು ಮಂತ್ರಿಗಳಾಗಿ ಪಟ್ಟ ಅಲಂಕರಿಸಿದ್ದಾರೆ, ರಾಜಭವನದ ಗಾಜಿನ ಮನೆಯಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್
ಗೆಹೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಸಚಿವರಿಗೆ ಖಾತೆಗಳನ್ನು ಇಂದೇ ಹಂಚಲಾಗಿದ್ದು, ಹಣಕಾಸು, ಗುಪ್ತಚರ ಹಾಗೂ ಡಿಪಿಎಆರ್ ಸೇರಿದಂತೆ ಹಂಚಿಕೆಯಾಗದ ಕೆಲ ಖಾತೆಗಳನ್ನು ಸಿಎಂ ಸಿದ್ಧರಾಮಯ್ಯ ತಮ್ಮ ಬಳಿಯೇ
ಉಳಿಸಿಕೊಂಡಿದ್ದಾರೆ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿದೆ.

ಯಾವ ಸಚಿವರಿಗೆ ಯಾವ ಖಾತೆ? ಇಲ್ಲಿದೆ ಡೀಟೇಲ್ಸ್…
ಸಿದ್ದರಾಮಯ್ಯ -ಹಣಕಾಸು, ಆPಂಖ ಮತ್ತು ಗುಪ್ತಚರ ಇಲಾಖೆ
ಡಿ.ಕೆ.ಶಿವಕುಮಾರ್ -ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ,
ಡಾ.ಜಿ.ಪರಮೇಶ್ವರ್ -ಗೃಹ ಸಚಿವ
ಹೆಚ್.ಕೆ.ಪಾಟೀಲ್ -ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ
ಕೆಚ್.ಮುನಿಯಪ್ಪ -ಆಹಾರ ಮತ್ತು ನಾಗರಿಕ ಖಾತೆ
ಕೆ.ಜೆ.ಜಾರ್ಜ್ -ಇಂಧನ ಖಾತೆ
ಎಂ.ಬಿ.ಪಾಟೀಲ್ -ಐಟಿ, ಬಿಟಿ
ರಾಮಲಿಂಗಾ ರೆಡ್ಡಿ -ಸಾರಿಗೆ
ಸತೀಶ್ ಜಾರಕಿಹೊಳಿ -ಲೋಕಪಯೋಗಿ
ಪ್ರಿಯಾಂಕ್ ಖರ್ಗೆ-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
ಜಮೀರ್ ಅಹ್ಮದ್ ಖಾನ್-ವಸತಿ, ವಕ್ಫ್ ಅಂಡ್ ಅಲ್ಪಸಂಖ್ಯಾತ
ಕೃಷ್ಣ ಬೈರೇಗೌಡ -ಕಂದಾಯ
ದಿನೇಶ್ ಗಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಚಲುವರಾಯಸ್ವಾಮಿ -ಕೃಷಿ
ಕೆ.ವೆಂಕಟೇಶ್ -ಪಶುಸಂಗೋಪನೆ
ಹೆಚ್.ಸಿ.ಮಹಾದೇವಪ್ಪ -ಸಮಾಜ ಕಲ್ಯಾಣ ಇಲಾಖೆ
ಈಶ್ವರ್ ಖಂಡ್ರೆ-ಅರಣ್ಯ ಮತ್ತು ಪರಿಸರ
ಕೆ.ಎನ್.ರಾಜಣ್ಣ-ಸಹಕಾರ
ಶರಣಪ್ಪ ಬಸಪ್ಪ ದರ್ಶಾನಾಪುರ್ -ಸಣ್ಣ ಕೈಗಾರಿಗೆ
ಶಿವನಾಂದ್ ಪಾಟೀಲ್ -ಜವಳಿ ಮತ್ತು ಸಕ್ಕರೆ ಖಾತೆ
ಆರ್‌ಬಿ ತಿಮ್ಮಾಪುರ್ -ಅಬಕಾರಿ ಮತ್ತು ಮುಜರಾಯಿ
ಎಸ್.ಎಸ್.ಮಲ್ಲಿಕಾರ್ಜುನ್ -ಗಣಿ ಮತ್ತು ಭೂವಿಜ್ಞಾನ
ಶಿವರಾಜ್ ತಂಡಗಡಿ -ಹಿಂದೂಳಿದ ವರ್ಗಗಳ ಕಲ್ಯಾಣ
ಶರಣ್ ಪ್ರಕಾಶ್ ಪಾಟೀಲ್ -ಉನ್ನತ ಶಿಕ್ಷಣ
ಮಂಕಾಳ್ ವೈದ್ಯ-ಮೀನುಗಾರಿಕೆ ಮತ್ತು ಬಂದರು
ಲಕ್ಷ್ಮೀ ಹೆಬ್ಬಾಳ್ಕರ್ -ಮಹಿಳೆ ಮತ್ತು ಮಕ್ಕಳ ಕಲ್ಯಾಣ
ರಹೀಂ ಖಾನ್ -ಪೌರಾಡಳಿತ
ಡಿ.ಸುಧಾಕರ್ -ಮೂಲಸೌಕರ್ಯ
ಸಂತೋಷ್ ಲಾಡ್- ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ
ಎನ್.ಎಸ್.ಬೊಸೆರಾಜು -ಪ್ರವಾಸೋದ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ
ಭೈರತಿ ಸುರೇಶ್- ನಗರಾಭಿವೃದ್ಧಿ
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಎಂ.ಸಿ.ಸುಧಾಕರ್-ವೈದ್ಯಕೀಯ
ಬಿ.ನಾಗೇAದ್ರ -ಯುವಜನ ಸೇವೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ

About The Author

Namma Challakere Local News
error: Content is protected !!