ಚಳ್ಳಕೆರೆ : ಚುನಾವಣೆ ನಂತರ ಚಳ್ಳಕೆರೆ ನಗರದಲ್ಲಿ ಕೋಟ ನೋಟು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಹೌದು ನಗರದ ಹಳೆ ಟೌನ್ ತಿಮ್ಮಪ್ಪನ ದೇವಸ್ಥಾನದ ಕಿರಾಣಿ ಅಂಗಡಿಗೆ ಅಪರಚಿತನೊಬ್ಬ 500 ರೂ ಮುಖ ಬೆಲೆಯ ಜೆರಾಕ್ಸ್ ನೋಟು ನೀಡಿ ಚಿಲ್ಲರೆ ಪಡೆದಿರುವುದು ಕಂಡು ಬಂದಿದೆ.
ಹಳೆ ಟೌನ್ ತಿಮ್ಮಪ್ಪನ ದೇವಸ್ಥಾನ ಕಿರಾಣಿ ಅಂಗಡಿಗೆ ಕಳೆದ ಎರಡು ದಿನಗಳ ಹಿಂದೆ ಶಾಲಾ ಬಾಲಕನಂತೆ ಸಮವಸ್ತ್ರ ಹಾಗೂ ಬ್ಯಾಗ್ ಹಾಕಿಕೊಂಡು ಬಂದು ಜನ ದಟ್ಟಣೆ ಇದ್ದಾಗ ಐದು ನೂರು ರೂ ಮುಖಬೆಲೆಯ ನೋಟು ನೀಡಿ ಚಿಲ್ಲರೆ ಪಡೆದು ಕಣ್ಮರೆಯಾಗಿದ್ದಾನೆ.
ನಂತರ ಅಂಗಡಿಯಲ್ಲಿ ಮಹಿಳೆ ಕಿರಾಣಿ ಸಾಮಾಗ್ರಿ ತರಲು ಹೋದಾಗ ಅದು ಜೆರಾಕ್ಸ್ ನೋಟು ಎಂದು ತಿಳಿದು ಬಂದು ಅಘಾತಗೊಂಡೊದ್ದಾರೆ.
ಜೆರಾಕ್ಸ್ ಮಾಡಿದ ನೋಟು ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಹೊರಗಿಂದ ಬಂದ ಬಂದ ಕಿಡಿಗೇಡಿಗಳು ನೋಟನ್ನು ಜೆರಾಕ್ಸ್ ಮಾಡಿ ಕೃತ್ಯ ಎಸಗಿರುವ ಎಂಬ ಶಂಕೆ ವ್ಯಕ್ತವಾಗಿದೆ.