ಚಳ್ಳಕೆರೆ : ಕಳೆದ ಐವತ್ತು ವರ್ಷಗಳ ನಿರಂತರ ರೈತರ ಹೋರಾಟಕ್ಕೆ ಹಾಲಿ ಶಾಸಕ ಟಿ.ರಘುಮೂರ್ತಿ ಸಾಫಲ್ಯ ದೊರಕಿಸಿಕೊಟ್ಟಿದ್ದಾರೆ ಆದ್ದರಿಂದ ಮತ್ತೊಂದು ಬಾರಿ ಶಾಸಕ ಟಿ.ರಘುಮೂರ್ತಿಗೆ ನಮ್ಮ ಬೆಂಬಲ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ ಹೇಳಿದರು.
ಅವರು ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಚುನಾವಣೆ ಪೂರ್ವ ಹಾಲಿ ಶಾಸಕ ಕೈ ಅಭ್ಯರ್ಥಿ ಪರ ನಮ್ಮ ಬೆಂಬಲ ಸೂಚಿಸಿ ಮಾತನಾಡಿದರು, ಈಡೀ ಕ್ಷೇತ್ರದಲ್ಲಿ ರೈತರ ಪರ ದೂರದೃಷ್ಠಿ ಕಾಳಜಿ ವುಳ್ಳ ಯಾರದರೂ ಶಾಸಕರು ಇದ್ದರೆ ಅದು ಶಾಸಕ ಟಿ.ರಘುಮೂರ್ತಿ ಮಾತ್ರ ಅತಂಹ ಸಜ್ಜನ ವ್ಯಕ್ತಿಯನ್ನು ಮೂರನೇ ಬಾರಿಗೆ ಗೆಲ್ಲಿಸುವುದು ನಮ್ಮ ಭಾಗ್ಯ ಬಯಲು ಸೀಮೆಯನ್ನು ಹಸಿರುಕರಣ ಮಾಡಿ ಇಂದು ರೈತನ ಜೀವನ ಹಸನು ಮಾಡಿದ ಶಾಸಕರು ಇವರಗೆ ನಮ್ಮ ಬೆಂಬಲ ಎಂದರು.
ತಾಲ್ಲೂಕು ಅಧ್ಯಕ್ಷ ಕೆ.ಚಿಕ್ಕಣ್ಣ, ಕಳೆದ ಹತ್ತು ವರ್ಷದಿಂದ ಕ್ಷೇತ್ರದಲ್ಲಿ ಎಲ್ಲಾಸಮುದಾಯಗಳನ್ನು ಒಟ್ಟುಗೂಡಿಸಿ ಎಲ್ಲಾ ಹಂತದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಜಾತಿವಾರು ಸಮುದಾಯದ ಭವನಗಳು ನಿರ್ಮಿಸಿ ಇನ್ನೂ ರೈತ ಕುಲಕ್ಕೆ ವೇದಾವತೊ ನದಿ ಪಾತ್ರದಿಂದ ಕುಡಿಯುವ ನೀರು ತಂದು ಇಂದು ರೈತ ಜೀವನ ಹಸಿರು ಮಾಡಿದ್ದಾರೆ ಆದ್ದರಿಂದ ಮತ್ತೊಂದು ರಘುಮೂರ್ತಿಗೆ ನಮ್ಮಬೆಂಬಲ ಎಂದು ವ್ಯಕ್ತಪಡಿಸಿದ್ದಾರೆ.
ಈದೇ ಸಂಧರ್ಭದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೊಮಗುದ್ದು ರಂಗಸ್ವಾಮಿ, ತಾಲ್ಲೂಕು ಅಧ್ಯಕ್ಷ ಕೆ.ಚಿಕ್ಕಣ್ಣ, ಕಾರ್ಯಧ್ಯಕ್ಷ ಹನುಮಂತ ರಾಯ, ಪ್ರಧಾನ ಕಾರ್ಯದರ್ಶಿ ಪುಟ್ಟೆಶ್ ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣಪ್ಪ, ಪರುಶುರಾಮ, ಗಿರೀಶ್ ರೆಡ್ಡಿ, ವೆಂಕಟೇಶ್, ನಿಂಗಣ್ಣ, ಇತರರು ಪಾಲ್ಗೊಂಡಿದ್ದರು