ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಸ್ಥಳಿಯ ಕಾಂಗ್ರೇಸ್ ದುರಾಡಳಿತ ನೋಡಿದ ಜನತೆ ಬಿಜೆಪಿ ಪಕ್ಷಕ್ಕೆ ಸೆರ್ಪಡೆಯಾಗುತ್ತಿದ್ದಾರೆ ನೂರಾರು ಸಂಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಬಿಜೆಪಿಯ ತತ್ವ ಸಿದ್ದಾಂತ ಮೆಚ್ಚಿ ಪಕ್ಷಕ್ಕೆ ಆಗಮಿಸುತ್ತಿದ್ದಾರೆ ಆದ್ದರಿಂದ 2023ಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಬಿಜೆಪಿ ಕಾರ್ಯಲಾಯದಲ್ಲಿ ಆಯೋಜಿಸಿದ್ದ ಪ್ರತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು ಪರುಶುರಾಂಪುರ ಭಾಗದ ಜೆಡಿಎಸ್ ಭದ್ರಾ ಕೋಟೆ ಎಂಬುದು ನಿಜಕ್ಕೂ ಬಿಎಲ್ ಗೌಡನ ಹೆಸರು ಉಳಿಸಿಕೊಂಡು ಬಂದಿದ್ದರು ಆದರೆ ರಾಜಾಕೀಯ ಬದಲಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷಕ್ಕೆ ಮನ್ನಣೆ ನೀಡಿ ಬಿಜೆಪಿ ಅಧಿಕಾರಕ್ಕೆ ತರಲಾಗುವುದು ಎಂದರು
ಇನ್ನೂ ನೂತನವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಜಿಪಂ.ಸದಸ್ಯ ಮುತ್ತುರಾಜ್ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿ ಕಳೆದ 2018ರಿಂದ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ ಆದರೆ ಜೆಡಿಎಸ್ ಅಭ್ಯರ್ಥಿ ನಡವಳಿಕೆಯಿಂದ ಬೇಸತ್ತು ರಾಷ್ಟಿçÃಯ ಪಕ್ಷ ಬಿಜೆಪಿ ಪಕ್ಷಕ್ಕೆ ಇಂದು ಸೇರ್ಪಡೆಗೊಂಡಿದ್ದೆನೆ

ಕಳೆದ 2018ರಲ್ಲಿ ಪರುಶುರಾಂಪುರ ಭಾಗದಲ್ಲಿ ಅತೀ ಹೆಚ್ಚಿನ ಮತಗಳಿಂದ ಜೆಡಿಎಸ್ ಅಭ್ಯರ್ಥಿಗೆ ನೀಡಿದ್ದೆವು ಆದರೆ ನಮ್ಮ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಿದ ಅವರಿಗೆ ಈ ಬಾರಿ ಕ್ಷೇತ್ರದಲ್ಲಿ ತೋರಿಸುತ್ತೆವೆ ಎಂದರು.
ಪಕ್ಷಕ್ಕೆ ನಿಷ್ಠೆಯಿಂದ ದುಡಿದ ವ್ಯಕ್ತಿಗಳನ್ನು ಸುಳ್ಳು ಆರೋಪದ ಮೂಲಕ ನಮಗೆ ನಿಷ್ಟುರಗಳನ್ನು ಒರಿಸಿ ನಮ್ಮನ್ನು ಕಡೆಗಣಿಸಿದ್ದಾರೆ ಆದ್ದರಿಂದ ಬಿಜೆಪಿಯ ತತ್ ಸಿದ್ದಾಂತಗಳನ್ನು ಮೆಚ್ಚಿ ಇಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕೆ ಅಧಿಕೃತವಾಗಿ ಸೇರ್ಪಡೆಗೊಂಡೆವು ಎಂದರು.
ಪರುಶುರಾAಪುರ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ 1987ರಲ್ಲಿ ಒಕ್ಕಲಿಗ ಸಮುದಾಯದ ಇತಿಹಾಸವಿದೆ ಆದರೆ ಇವರ ವರ್ತನೆಯಿಂದ ನಮಗೆ ಹೊರಗಡೆ ಬರಬೇಕಾಯಿತು, ನಾನು ಪ್ರತಿ ವರ್ಷ ಒಂದು ಕಾರ್ಯಕ್ರಮ ಕೊಡುವ ಮೂಲಕ ಜನಮಾಸದಲ್ಲಿ ಉಳಿದಿದ್ದೆನೆ ನಾನು ಎಲ್ಲಿಯೂ ಹೋಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಇದೇ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ತಾಲೂಕು ಮಡಲ ಉಪಾಧ್ಯಕ್ಷ ಎಲೆ ಭದ್ರಪ್ಪ, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!