ಚಳ್ಳಕೆರೆ : ರಾಜ್ಯವೇ ತಿರುಗಿ ನೋಡುವಂತ ಅಭಿವೃದ್ದಿ ಕ್ಷೇತ್ರದ ಹಾಲಿ ಶಾಸಕ ಟಿ.ರಘುಮೂರ್ತಿ ಮಾಡಿದ್ದಾರೆ ಅಂತಹ ಅಭಿವೃದ್ದಿ ಹರಿಕಾರನಿಗೆ ಮತ್ತೊಂದು ಬಾರಿ ಜನರ ಆರ್ಶೀವಾದ ಇದೆ 2023ಕ್ಕೆ ಇವರೆ ಶಾಸಕರಾಗುತ್ತಾರೆ ಎಂದು ಡಾ.ಕಲಮರಹಳ್ಳಿ ಮಲ್ಲಿಕಾರ್ಜುನಾ ಹೇಳಿದರು
ಅವರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ದಿಗೆ ಮೆಚ್ಚಿ ಇಂದು ಈಡೀ ಸಾಹಿತ್ಯ ಸಮೂಹದ ಸಮಾನ ಮನಸ್ಕರ ಒಕ್ಕೂಟದಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಶಿಕ್ಷಣ ಕೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಬಯಲು ಸೀಮೆಯ ನಿರುದ್ಯೋಗವಂತ ಯುವಕರಿಗೆ ಉದ್ಯೋಗ ನೀಡುವಂತಹ ಮಹತ್ವದ ಕಾರ್ಯಮಾಡಿದ್ದಾರೆ.
ನಗರದಲ್ಲಿ ಇಂಜಿನಿಯಾರ್ ಕಾಲೇಜ್, ಜಿಟಿಟಿಸಿ ಕೇಂದ್ರ ಈಗೇ ಹಲವು ಕಟ್ಟಡಗಳನ್ನು ಕಟ್ಟಿಸುವುದರ ಮೂಲಕ ಕ್ಷೇತ್ರವನ್ನು ಅಭಿವೃದ್ದಿ ಪಥದತ್ತ ಕೊಂಡುಯ್ಯುತ್ತಿದ್ದಾರೆ.
ಇನ್ನೂ ರೈತನ ಜೀವನಾಡಿಯಾದ ವೇದಾವತಿ ನದಿಗೆ ನೀರು ಬಿಡಿಸುವ ಮೂಲಕ ಬಯಲು ಸೀಮೆ ಹಸಿರುಕರಣಕ್ಕೆ ನಾಂದಿ ಹಾಡಿದೆ ಎಂದರು.
ಇನ್ನೂ ಕೇಂದ್ರ ಮತ್ತು ರಾಜ್ಯದ ಜನವಿರೋಧಿ ಸರಕಾರಗಳ ನಿಲುವು ಸಾಮಾನ್ಯ ಜನರಿಗೆ ನುಂಗಲಾರದ ತುತ್ತಾಗಿದೆ ರೈತ ವಿರೋಧಿ ಕಾನೂನು ಕಾಯ್ದೆಗಳನ್ನು ಜಾರಿಗೆ ತಂದು ಬ್ರಹ್ಮಣರಿಗೆ ಹತ್ತು ರಷ್ಟು ಮೀಸಲಾತಿ ಹೆಚ್ಚಳ ಮಾಡಿ ಇನ್ನೂಳಿದ ಸಮುದಾಯವನ್ನು ಕಡೆಗಣಿಸಿವೆ ಎಂದು ಆರೋಪಿಸಿದರು.
ಈದೇ ಸಂಧರ್ಭದಲ್ಲಿ ಜಿಎಸ್ ಸಿದ್ದರಾಮಯ್ಯ, ಪ್ರೋ.ಜಿ.ಶರಣಪ್ಪ, ಮುಕುಂದ್ ರಾವ್, ವೆಂಕಟರಾಮಣಪ್ಪ, ಇತರರು ಇದ್ದರು.