ಚಳ್ಳಕೆರೆ : ಈಡೀ ಕ್ಷೇತ್ರದಲ್ಲಿ ರಾಜಾಕೀಯ ಪಕ್ಷಗಳನ್ನು ಹಿಮ್ಮೆಟಿಸಿ ತನ್ನದೇ ಆದ ಅಸ್ತಿತ್ವ ಹೊಂದಿದ ಕೆಟಿ.ಕುಮಾರಸ್ವಾಮಿ ಪಕ್ಷೇತರರವಾಗಿ ಕ್ಷೇತ್ರದಲ್ಲಿ ಪ್ರತಿನಿಧಿಸಿ ಈಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೂಡ ನಡೆಸುತ್ತಿದ್ದಾರೆ
ಅದರಂತೆ ಇಂದು ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ತೆರಳಿ ಭರ್ಜರಿಯಾಗಿ ಮತಬೇಟೆ ನಡೆಸಿದರು.
ಇನ್ನೂ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಈಡೀ ಕ್ಷೇತ್ರದಲಿ ತನ್ನದೇ ಆದ ಮತಬ್ಯಾಂಕ್ ಇರುವ ಇವರು ಪಕ್ಷೇತರ ಅಭ್ಯರ್ಥಿ ಬೆಂಬಲಕ್ಕೆ ನಿಂತಿರುವುದು ರಾಜಾಕೀಯ ಪಕ್ಷಗಳಲ್ಲಿ ನಡುಕು ಉಂಟಾಗಿದೆ.
ಇನ್ನೂ ಚುನಾವಣೆಗೆ ಕೇವಲ 6ದಿನ ಬಾಕಿ ಇರುವಾಗಲೇ ಈಡೀ ಕ್ಷೇತ್ರದ ಕಾಂಗ್ರೇಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳನ್ನು ಹತ್ತಿಕ್ಕಿ ಮುನ್ನುಗ್ಗುತ್ತಿರುವ ಪಕ್ಷೇತರ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಭರ್ಜರಿಯಾಗಿ ಸ್ವಾಗತ ಕೂಡ ಸಿಗುತ್ತಿದೆ
ಅದರಂತೆ ಒಮ್ಮೆ ಕ್ಷೇತ್ರದಲ್ಲಿ ಬದಲಾವಣೆ ತನ್ನಿ ನಿಮ್ಮ ಜೀವನದಲ್ಲಿ ನವ ಚೈತನ್ಯ ತರುತ್ತೆನೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಹೇಳಿದ್ದಾರೆ.
ಈಡೀ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೇಕು ನಿಮ್ಮ ಜೀವನದಲ್ಲಿ ಹೊಸ ಹುರುಪು ತರಬೇಕು ಅಂದರೆ ನಿಮ್ಮ ಆಡಳಿತದ ಶಾಸಕ ನಿಮ್ಮ ಕನಸಿನಂತೆ ಇರಬೇಕು ಅಂತಹ ಅಭಿವೃದ್ದಿ ಮಾಡಿ ತೊರಿಸುತ್ತೆನೆ ಎಂದರು.