ಚಳ್ಳಕೆರೆ : ಕಲ್ಲಿನ ಕೋಟೆಯಯಲ್ಲಿ ಕಾಂಗ್ರೇಸ್ ಭದ್ರಾ ಕೋಟೆಯಾದ ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ಕಳೆದ 2018ರಲ್ಲಿ ಮುನ್ನುಗ್ಗಿದ ಜೆಡಿಎಸ್ ಅಭ್ಯರ್ಥಿ ಅತೀ ಕಡಿಮೆ ಅಂತರದಲ್ಲಿ ಹಿನ್ನೆಡೆಯಾದರು
ಆದರೆ ಹಠ ಬಿಡದೆ 2023ರವರೆಗೆ ಹೊಂಚು ಹಾಕಿ ಕಾದಿರುವ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಈ ಬಾರಿ ಶತಾಯ ಗತಾಯವಾಗಿ ಕಾಂಗ್ರೇಸ್ ಭದ್ರಾ ಕೋಟೆಯನ್ನು ಭೇಧಿಸಲೇ ಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಇಡೀ ಕ್ಷೇತ್ರದಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.
ಅದರಂತೆ ಕ್ಷೇತ್ರದ ತುರುವನೂರು ಹೋಬಳಿಯ ಹಲವು ಗ್ರಾಮಗಳಿಗೆ ತೆರಳಿ ಮತಬೇಟೆ ನಡೆಸಿದರು. ಇನ್ನೂ ಹಲವು ಮುಖಂಡರನ್ನು ಕೂಡ ತಮ್ಮ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಗೆ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಪಿ.ತಿಪ್ಪೇಸ್ವಾಮಿ ಇತರರು ಸಾಥ್ ನೀಡಿದ್ದಾರೆ.
ರಾಜ್ಯದಲ್ಲಿ ನೂರಕ್ಕೆ ನೂರಷ್ಟು ಜೆಡಿಎಸ್ ಅಧಿಕಾರಕ್ಕೆ ಬರುವುದು ಶತ ಸಿದ್ದ ಆದ್ದರಿಂದ ಕ್ಷೇತ್ರದಲ್ಲಿ ನಿಮ್ಮ ಆರ್ಶಿವಾದ ಮಾಡಿ ಎಂದರು.