ಚಳ್ಳಕೆರೆ : ನಾನು ಹತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ದಿ ಜನರ ಕಣ್ಣಾ ಮುಂದೆ ಇದೆ
ನಾನು ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸ ಮತದಾರರೇ ವ್ಯಕ್ತಪಡಿಸುತ್ತಿದ್ದಾರೆ
ಎಂದು ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಚಳ್ಳಕೆರೆ ಕ್ಷೇತ್ರದ ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳವರ್ತಿ, ಗೊಲ್ಲರಹಟ್ಟಿ, ಚಿಪ್ಪಿನಕೆರೆ, ಚಿಕ್ಕಗೊಂಡನಹಳ್ಳಿ ಹಾಗೂ ತುರುವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಗಲೇರಹಟ್ಟಿ, ಹವಲೇನಹಟ್ಟಿ, ಬಂಗಾರಕ್ಕನಹಳ್ಳಿ ಈಗೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಮಾತನಾಡಿದರು,.
ಇನ್ನೂ ಹಾಲಿ ಶಾಸಕ ಟಿ.ರಘುಮೂರ್ತಿ ಗ್ರಾಮಗಳಿಗೆ ತೆರುಳುತ್ತಿದ್ದಂತೆ ಕೈ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಈಡೀ ಗ್ರಾಮದಲ್ಲಿ ಕಾಂಗ್ರೇಸ್ ಮತ್ತೊಮ್ಮೆ ಎಂಬ ಕೂಗು ಮೊಳಗಿತು
ಇನ್ನೂ ನೂರಾರು ಕೈ ಕಾರ್ಯಕತರು ಹಾಲಿ ಶಾಸಕ ಟಿ.ರಘುಮೂರ್ತಿಗೆ ಸಾಥ್ ನೀಡಿದರು.