ಚಳ್ಳಕೆರೆ : ಮತದಾರರು ಈ ಭಾರಿ ಬದಲಾವಣೆ ಬಯಸುತ್ತಿದ್ದಾರೆ ಕಳೆದ ಹತ್ತು ವರ್ಷಗಳ ಕಾಂಗ್ರೇಸ್ ಆಡಳಿತದಿಂದ ಮತದಾರರು ಬೇಸತತಿದ್ದಾರೆ ಆದ್ದರಿಂದ ಈ ಭಾರಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.
ಅವರು ಚಳ್ಳಕೆರೆ ಕ್ಷೇತ್ರದ ಕುರುಡಿಹಳ್ಳಿ, ಬಾಲೆನಹಳ್ಳಿ ಈಗೇ ಹಲವು ಗ್ರಾಮಗಳಲ್ಲಿ ಮತಬೇಟೆ ನಡೆಸಿ ಮಾತನಾಡಿದರು.
ಇನ್ನೂ ನೆಚ್ಚಿನ ಅಭ್ಯರ್ಥಿ ಎಂ.ರವೀಶ್ ಕುಮಾರ್ ಗೆ ಕಾರ್ಯಕರ್ತರು ಹಾಗೂ ಮುಖಂಡರು ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ ಕೋರುತ್ತ ತಮ್ಮ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬಿಸಿದೆ ಈ ಭಾರಿ ಜೆಡಿಎಸ್ ಎಂದು ಘೊಷಣೆಗಳನ್ನು ಕೂಗಿದರು.
ಇನ್ನೂ ತಾಲೂಕು ಅದ್ಯಕ್ಷ ಪಿ.ತಿಪ್ಪೆಸ್ವಾಮಿ, ಚೆನ್ನಿಗರಾಮಯ್ಯ, ನಾಗರಾಜ್ ಈಗೇ ಹಲವು ಮುಖಂಡು ಇಡೀ ದಿನ ರವೀಶ್ ಗೆ ಸಾಥ್ ನೀಡಿದರು.