ಚಳ್ಳಕೆರೆ : ರಾಜ್ಯದಲ್ಲಿ ನಡೆಯುವ 2023ರ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರ ರಾಜಕೀಯ ನೈತಿಕತೆಯನ್ನು ಉಳಿಸಿಕೊಳ್ಳಲಿದೆ ಎಂದು ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.

ಅವರು ಚಳ್ಳಕೆರೆ ಕ್ಷೇತ್ರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಅವರ ಜೊತೆಯಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿ ಬಹುತೇಕ ತಜ್ಞರು ದಿನ ರಾಜಕೀಯ ಕುಲುಷಿತಗೊಂಡು ನೈತಿಕ ಅದಪ್ಪತನ ತಲುಪಿದೆಯೆಂದು ವಿಶ್ಲೇಷಣೆ ಮಾಡುತ್ತಾರೆ ಚಳ್ಳಕೆರೆ ಮತಕ್ಷೇತ್ರದ ಜನ ಬಹಳ ಪ್ರಭುದ್ಧರು ಧರ್ಮ ಉಳಿಯಬೇಕು ಸತ್ಯ ಗೆಲ್ಲಬೇಕು ಎಂಬ ಶೀರ್ಷಿಕೆಡಿ ಇಂದಿನ ಚುನಾವಣೆಯನ್ನು ಮಾಡುತ್ತಾರೆ ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಸಜ್ಜನ ರಾಜಕಾರಣಿ ಯುವಕರಿದ್ದು ಶೋಷಿತರ ಬಡವರ ದೀನ ದಲಿತರ ಬಗ್ಗೆ ಅಪಾರ ಕನಸ ಇಟ್ಟುಕೊಂಡಿದ್ದಾರೆ
ಇವರುಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ತನ್ನದೇ ಆದ ಪ್ರಣಾಳಿಕೆಯನ್ನು ಇಟ್ಟುಕೊಂಡಿದ್ದಾರೆ ಮೂಲಕ ನಿರುದ್ಯೋಗ ಸಮಸ್ಯೆ ವೈದ್ಯಕೀಯ ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಿಬಿಎಸ್ಸಿ ಶಾಲೆಗಳ ನಿರ್ಮಾಣ ಮೂವತ್ತು ಸಾವಿರ ಬಡವರಿಗೆ ಸೂರು ಮತ್ತು ನಿವೇಶನ ಒದಗಿಸುವ ಕನಸು ಇಟ್ಟುಕೊಂಡಿದ್ದಾರೆ, ಇದೊಂದು ಧರ್ಮ ಮತ್ತು ಸತ್ಯದ ಚುನಾವಣೆ ಉಳಿದಂತ ಅಭ್ಯರ್ಥಿಗಳು ಬೇರೆ ಮಾರ್ಗದಲ್ಲಿ ಬಂದAತಹ ಹಣದಿಂದ ಚುನಾವಣೆ ಮಾಡಲು ಹೊರಟಿದ್ದಾರೆ ಇದರಿಂದ ಧರ್ಮವನ್ನು ರಕ್ಷಿಸಿ ಸತ್ಯವನ್ನು ಗೆಲ್ಲಿಸಿ ಎಂದು ಕರೆ ನೀಡಿದರು

ಇನ್ನೂ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಪಕ್ಷೇತರ ಅಭ್ಯರ್ಥಿ ತನ್ನ ತಂದೆ ಮಾಡಿದ ಕ್ಷೇತ್ರದ ಕೆಲಸಗಳು ನನಗೆ ಶ್ರೀರಕ್ಷೆಯಾಗಿವೆ ನಾನು ಯಾವುದೇ ಹಣಬಲದಿಂದ ಚುನಾವಣೆಗೆ ನಿಂತಿಲ್ಲ, ಇಲ್ಲಿನ ಕೆಲ ಅಭ್ಯರ್ಥಿಗಳು ಒಬ್ಬರು ಬೆಂಗಳೂರು ಇನ್ನೊಬ್ಬರು ತುಮಕೂರು ಜನಸಾಮಾನ್ಯರು ಇವರನ್ನು ಬೆಂಗಳೂರು ಮತ್ತು ತುಮಕೂರಿಗೆ ಹುಡುಕಿಕೊಂಡು ಹೋಗುವುದೇ ಒಂದು ದುಸ್ತರವಾದ ಸಂಗತಿಯಾಗಿದೆ ಆದುದರಿಂದ ನನಗೊಂದು ಬರಿ ಅವಕಾಶ ನೀಡಬೇಕೆಂದು ಮನವಿ ಮಾಡಿದರು

About The Author

Namma Challakere Local News
error: Content is protected !!