ಚಳ್ಳಕೆರೆ :
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದಂತ ಕೆ ಟಿ ಕುಮಾರಸ್ವಾಮಿ ಯವರಿಗೆ ಕ್ಷೇತ್ರದ ಯಾದವ ಜನಾಂಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಮಾಜಿ ತಾಲೂಕ ಪಂಚಾಯತಿಯ ಅಧ್ಯಕ್ಷ ಅಜ್ಜಪ್ಪ ಹೇಳಿದರು
ಅವರು ಪರಶುರಾಂಪುರ ಹೋಬಳಿಯ ವೀರಚಿಕ್ಕಣ್ಣ ದೇವಸ್ಥಾನದ ಆವರಣದಲ್ಲಿ ಯಾದವ ಜನಾಂಗದ ಸುಮಾರು ಜನರು ಪರಶುರಾಂಪುರ ಹೋಬಳಿಯ 28 ಗ್ರಾಮಗಳಿಂದ ಆಗಮಿಸಿದ್ದು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ ಅವರನ್ನು ಈ ಬಾರಿ ಶಾಸಕರನ್ನಾಗಿ ಮಾಡಲು ಪಣತೊಟ್ಟಿದ್ದಾರೆ.
ಕ್ಷೇತ್ರಕ್ಕೆ ಮಾಜಿ ಮಂತ್ರಿಗಳಾದಂತ ತಿಪ್ಪೇಸ್ವಾಮಿಯವರ ಕೊಡುಗೆ ಅಪಾರವಾಗಿದೆ ಭಾವನಾತ್ಮಕವಾಗಿ ನಮ್ಮ ಜನಾಂಗದ ಜೊತೆ ಸದರಿ ತಿಪ್ಪೇಸ್ವಾಮಿಯವರು ಬೆರೆತು ಹೋಗಿದ್ದರು ಯಾದವ ಜನಾಂಗದ ಮೇಲೆ ಅಪಾರವಾದ ಪ್ರೀತಿ ವಿಶ್ವಾಸ ಮತ್ತು ಅಭಿಮಾನ ಹೊಂದಿದರು ಅವರ ಮಗನಾದಂತ ಕುಮಾರಸ್ವಾಮಿ ಅವರು ಕೂಡ ಸಜ್ಜನ ನಿಷ್ಕಲ್ಮಶ ಮನಸ್ಸಿನವರು ಜನಾಂಗದ ಯಾರೋ ನಾಲ್ಕು ಜನ ಯಾವುದೋ ಪಕ್ಷಕ್ಕೆ ಬೆಂಬಲ ಘೋಷಿಸಿದ ಮಾತ್ರಕ್ಕೆ ಈಡೀ ಜನಾಂಗವೇ ಬೆಂಬಲಿಸಿದೆ ಎಂದು ಹೇಳಲು ಬರುವುದಿಲ್ಲ
ಈಗ ಬಂದಿರುವಂತಹ ಹಲವು ಮಂದಿಯು ಕೂಡ ಮುಖಂಡರುಗಳು 28 ಗ್ರಾಮಗಳಿಂದ ಬಂದಿದ್ದೇವೆ ಒಕ್ಕೋರಾಲಿನಿಂದ ಪಕ್ಷೇತರ ಅಭ್ಯರ್ಥಿಯನ್ನು ವೀರಕರಿಯಣ್ಣ ದೇವರ ಸನ್ನಿಧಿಯಲ್ಲಿ ಬೆಂಬಲಿಸುತ್ತೇವೆ ಎಂದು ಹೇಳಿದರು
ಇದಕ್ಕೆ ಎಲ್ಲಾ ಐನೂರು ಮಂದಿ ಮುಖಂಡರು ಸಾಕ್ಷಿಕರಿಸಿದರು ಇದೇ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಇಡೀ ಜನಾಂಗದ ಹಿತ ಕಾಯುವುದಾಗಿ ಈ ಜನಾಂಗದ ಮೇಲೆ ವಿಶೇಷವಾದ ವಿಶ್ವಾಸ ಆತ್ಮೀಯತೆ ನನಗಿದ್ದು ನನ್ನ ಜೀವನವನ್ನು ಇಂತಹ ಜನಾಂಗದ ಅಭಿವೃದ್ಧಿಗೆ ಮುಡಿಪಾಗಿಡುತ್ತೇನೆಂದು ಹೇಳಿದರು
ನಿಕಟ ಪೂರ್ವತಶಿಲ್ದಾರ್ ಎನ್.ರಘುಮೂರ್ತಿ ಮಾತನಾಡಿದರು
ಈ ಸಂದರ್ಭದಲ್ಲಿ ರಾಧಾಸ್ವಾಮಿ, ಮಲ್ಲಿಕಾರ್ಜುನ, ಕೆ ಟಿ ನಿಜಲಿಂಗಪ್ಪ, ರಘು, ಸುರೇಶ, ಸೋಮಶೇಖರ ಮುಂತಾದ ಮುಖಂಡರು ಸೇರಿದಂತೆ ಸುಮಾರು ಜನ ಮುಖಂಡರು ಪರಶುರಾಂಪುರ ಹೋಬಳಿಯ 28 ಗ್ರಾಮಗಳಿಂದ ಆಗಮಿಸಿದ್ದರು