ಚಳ್ಳಕೆರೆ : ಕಳೆದ ಹತ್ತು ವರ್ಷಗಳ ಕ್ಷೇತ್ರದ ಅಭಿವೃದ್ಧಿಗೆ ಮತದಾರರು ಋಣ ತೀರಿಸಲು ಮತ್ತೊಮ್ಮೆ ಬಂದಿದ್ದೆನೆ, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅಪಾರ ಕಾರ್ಯಕರ್ತರ ಮುಖಂಡರು ಬೆಂಬಲ ನೀಡುತ್ತಿದ್ದಾರೆ, ಅದರಂತೆ ಮತ್ತೊಮ್ಮೆ ಅವಕಾಶ ಕೊಡಿ ಎಂದು ಶಾಸಕ ಟಿ.ರಘುಮೂರ್ತಿ ಹೇಳೀದರು.
ಅವರು ಚಳ್ಳಕೆರೆ ಕ್ಷೇತ್ರದ ತುರುನೂರು ಹೊಬಳಿಯ ವ್ಯಾಪ್ತಿಯ ಹಲವು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿ ನಂತರ ಮಾತನಾಡಿದರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ನೀಡುವ ಭರಸವೆಯಂತೆ ಸರಕಾರ ಅಧಿಕಾರಕ್ಕೆ ಬಂದ ತಕ್ಷಣದ ಕುಟುಂಬದ ಯಜಮಾನಿಗೆ ಹೆಸರಿಗೆ 2 ಸಾವಿರ ರೂ ಖಾತೆಗೆ ಜಮೆ, 200 ಯುನಿಟ್ ವಿದ್ಯುತ್ ಉಚಿತ ಸೇರಿದಂತೆ ಭರಸವೆಯ ಗ್ಯಾರೆಂಟ್ ಕಾರ್ಡ್ಗಳನ್ನು ಈಗಾಗಲೆ ಮನೆಗಳಿಗೆ ತಲುಪಿಸಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದ್ದರೂ ಸಹ ಇನ್ನು ಸಾಕಷ್ಟು ಅಭಿವೃದ್ಧಿ ಮಾಡುವ ಕನಸು ಇದೆ ಮೂರನೇ ಬಾರಿಗೆ ಗೆದ್ದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು.
ಶಿಕ್ಷಣ, ಸಾರಿಗೆ, ರಸ್ತೆ, ಆರೋಗ್ಯ. ನಿರುದ್ಯೋಗ, ಸೇರಿದಂತೆ ವಿವಿಧ ಜನಪರ ಯೋಜನೆಗಳಿಗೆ ಮೊದಲ ಆಧ್ಯತೆ ನೀಡುವ ಮೂಲಕ ಎಲ್ಲಾ ವರ್ತದ ತಳ ಸಮುದಾಯ, ಕಟ್ಟಕಡೆ ಅರ್ಹ ಕುಟುಂಬಗಳಿಗೆ ಸರಕಾರಿ ಸೌಲಭ್ಯಗಳಿಂದ ತಲುಪಿಸುವ ಮೂಲಕ ಜನಸೇವೆ ಮಾಡಲಾಗುವುದು ಆದ್ದರಿಂದ ಜನರ ತಿರ್ಮಾನ ಮೇ10ರಂದು ಮತನೀಡುವ ಮೂಲಕ ಬೆಂಬಲ ಕೋರಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯ ಎಲೆಕ್ಷನ್ ವಾರ್ ಭರ್ಜರಿಯಾಗಿ ನಡೆಯುತ್ತಿದೆ
ಅದರಂತೆ ಕಳೆದ ಎರಡು ಬಾರಿ ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಎರಿದ ಹಾಲಿ ಶಾಸಕ ಟಿ.ರಘುಮೂರ್ತಿ ರವರು ಈಗಾಗಲೇ ಕ್ಷೇತ್ರದಲ್ಲಿ ಬೀಡು ಬಿಟ್ಟು 2023ಕ್ಕೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿಗಾಗಿ ಭರ್ಜರಿಯಾಗಿ ಮತಬೇಟೆ ನಡೆಸುತ್ತಿದ್ದಾರೆ
ಅದರಂತೆ ಇಂದು ತೂರುವನೂರು ಹೋಬಳಿಯ ಹಲವು ಹಳ್ಳಿಗಳಲ್ಲಿ ಮತಬೇಟೆ ನಡೆಸಿದರು.
ಇನ್ನೂ ರಘುಮೂರ್ತಿ ಹೊದಕಡೆಗಳಲ್ಲ ಗ್ರಾಮದಲ್ಲಿ ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದರೆ ಇನ್ನೂ ಮಹಿಳೆಯರು ಆರತಿ ಬೆಳಗುವ ಮೂಲಕ ಆಹ್ವಾನ ನೀಡಿದ್ದಾರೆ,
ಹೂವು ಮಾಲೆಹಾಕಿ ಹೂವಿನ ಮಳೆ ಸುರಿಸುವ ಮೂಲಕ ಕಾರ್ಯಕರ್ತರು ಹಾಲಿ ಶಾಸಕನಿಗೆ ಸಾಥ್ ನೀಡಿದ್ದಾರೆ