ಚಳ್ಳಕೆರೆ : ನಿವೃತ್ತ ಅಧಿಕಾರಿ ಎನ್.ರಘುಮೂರ್ತಿ ಮೇಲೆ ತಳಕು ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಇಂದು ತಾತ್ಕಾಲಿಕವಾಗಿ ರೀಲಿಪ್ ಸಿಕ್ಕಿದೆ.

ಹೌದು ಚಳ್ಳಕೆರೆ ತಾಲೂಕಿನ ತಹಶಿಲ್ದಾರ್ ಹಾಗಿ ಕರ್ತವ್ಯ ನಿರ್ವಹಿಸಿದ ಎನ್.ರಘುಮೂರ್ತಿ ರಾಜಿನಾಮೆ ಕೊರಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಂಕಿತ ಹಾಕಿ ಶರತ್ತು ಬದ್ದವಾಗಿ ರಾಜಿನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಇದನ್ನು ಬೆನ್ನತ್ತಿ ಹೊದ ನಿವೃತ್ತ ಅಧಿಕಾರಿ ಎನ್.ರಘುಮೂರ್ತಿ ಕರ್ನಾಟಕ ಉಚ್ಚ ನ್ಯಾಯಾಲಾಯದ ಮೇಟ್ಟಿಲು ಹೇರಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ‌ ನ್ಯಾಯಾಲಯ ತಡೆಯಾಗ್ನೇ ನೀಡಿದೆ ಎಂದು ನಿವೃತ್ತ ಅಧಿಕಾರಿ ಎನ್.ರಘುಮೂರ್ತಿ ಮಾದ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ

ರಾಜಿನಾಮೆ ಅಂಗೀಕಾರವಾದ ಕೆಲವೇ ಗಂಟೆಗಳಲ್ಲಿ ಪ್ರಕರಣ ದಾಖಲು ಮಾಡಿರುವುದು ರಾಜಕೀಯ ಪ್ರೇರಿತ ಮೊಕದ್ದಮೆ ಎಂದು ನ್ಯಾಯಲಯ ಅಭಿಪ್ರಾಯ ಪಟ್ಟಿದೆ, ನನ್ನ ಮೇಲೆ ದಾಖಲಾಗಿರುವ ಈ ಮೊಕದ್ದಮೆ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದ್ದು ಇಂದು ರಜೆ ಕಾಲದ ಜಸ್ಟಿಸ್ ಶಿವಶಂಕರಗೌಡ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು ಪ್ರಕರಣದ ವಿಚಾರಣೆ ಮಾಡಿ ಸತ್ಯಸತ್ಯತೆಯನ್ನು ಪರಿಶೀಲಿಸಿದ ಪೀಠ ಸದರಿ ಅಧಿಕಾರಿಯ ರಾಜೀನಾಮೆ ಅಂಗೀಕೃತಗೊಂಡ ಒಂದು ಗಂಟೆಯಲ್ಲಿ ಇವರ ವಿರುದ್ಧ ಮೊಕದ್ದಮೆ ದಾಖಲಾಗಿರುವುದು ರಾಜಕೀಯ ಪ್ರೇರಿತ ವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ,ಆದ್ದರಿಂದ ಅಧಿಕಾರಿಯ ವಿರುದ್ಧದ ತನಿಖೆಗೆ ತಡೆಯಜ್ಞೆ ನೀಡಿ ಈ ಕೃತ್ಯದಲ್ಲಿ ಭಾಗಿಯಾಗಿರುವಂತಹ ಉಳಿದಂತ ನೌಕರರ ವಿರುದ್ಧ ತನಿಖೆ ಮುಂದುವರಿಸಬಹುದೆಂದು ಅಭಿಪ್ರಾಯಪಟ್ಟಿದೆ ಎಂದು ಮಾಹಿತಿ‌ ಹಂಚಿಕೊಂಡಿದ್ದಾರೆ.

ಇದರಿಂದ ಚಳ್ಳಕೆರೆ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಸೇವೆ ಸಲ್ಲಿಸಿದ ಎನ್. ರಘುಮೂರ್ತಿಗೆ ಬಿಗ್ ರಿಲೀಫ್ ದೊರೆದಂತಾಗಿದೆ.

ಮುಂದೆ ಇವರು ಯಾವ ಪಕ್ಷವನ್ನು ಬೆಂಬಲಿಸಿ ದಡ ಸೇರಿಸಬಲ್ಲರೆಂಬುದನ್ನು ಕಾದುನೋಡಬೇಕಿದೆ

About The Author

Namma Challakere Local News
error: Content is protected !!