ಚಳ್ಳಕೆರೆ : ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಜನಪರವಾದ ಆಡಳಿತ ನೀಡಿದೆ ಆದ್ದರಿಂದ 2023ರ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವು ಮೂಲಕ ಲಿಂಗಾಯಿತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಲಾಗುತ್ತದೆ ಎಂದು ಗುಜರಾತ್ ರಾಜ್ಯದ ಮಾಜಿ ರಾಜ್ಯಾದ್ಯಾಕ್ಷ ಜೀತು ಬಾಯ್ ವಾಗಣಿ ಹೇಳಿದರು.
ಇಂದು ಚಳ್ಳಕೆರೆ ನಗರದ ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ರಾಜ್ಯದಲ್ಲಿ ಏಕಕಾಲಕ್ಕೆ ಇಂದು ಬಿಜೆಪಿ ಪಕ್ಷದಿಂದ ಆಮ್ಮಿಕೊಂಡ ಮನೆ ಮೆನಗೆ ಕಾರ್ಯಕ್ರಮ, ರೋಡ್ ಶೋ, ಸಾರ್ವಜನಿಕರ ಸಭೆ, ಹಾಗೂ ಮಹಾ ಪ್ರಚಾರ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,
ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಅಧಿಕಾರಕ್ಕೆ ತರಲು ಈಡೀ ರಾಜ್ಯದಲ್ಲಿ ಬಿಜೆಪಿ ಆಡಳಿತದ ಸರಕಾರ ಜಾರಿಗೆ ತಂದ ಹಲವು ಯೋಜನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಚುನಾವಣೆ ಮುಗಿಯುವ ತನಕ ಇಲ್ಲಿಯ ಉಸ್ತೂವಾರಿ ನೋಡಿಕೊಂಡು ಆಯಿಲ್ ಸಿಟಿಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೆವೆ ಎಂದರು.
ಇದೇ ಸಂಧರ್ಭದಲ್ಲಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಜಯಪಾಲಯ್ಯ ಅಭ್ಯರ್ಥಿ ಆರ್.ಅನಿಲ್ ಕುಮಾರ್, ಜಿಪಂ ಮಾಜಿ ಸದಸ್ಯ ಸೋಮಶೇಖರ್ ಮಂಡಿಮಠ್, ಗುಜರಾತ್ ಮುಖ್ಯ ಸಚೇತಕ ಕೌಶಿಕ್ ಬಾಯ್, ಚುನಾವಣೆ ಉಸ್ತುವಾರಿ ನರೇಂದ್ರ, ಇತರರು ಇದ್ದರು.

About The Author

Namma Challakere Local News
error: Content is protected !!