ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಡಾ. ಬಿ ಅರ ಅಂಬೇಡ್ಕರ್ ರವರ 132ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಎಸ್ ಮಂಜಣ್ಣ ಹೇಳಿದ್ದರು.
ಈ ವೇಳೆ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಜಿ ಎಸ್ ತಿಪ್ಪೇಸ್ವಾಮಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಾ ಪುಣ್ಯವಂತರು ನಾಡಿನ ಪ್ರತಿಯೊಬ್ಬ ಮಹನೀಯರಾದ ಬುದ್ಧ ಬಸವ ಡಾ. ಬಿಆರ್ ಅಂಬೇಡ್ಕರ್ ವಾಲ್ಮೀಕಿ ಮಹಾನೀರ ಜಯಂತಿಯನ್ನು ಆಚರಿಸುತ್ತೇವೆ ಉದ್ದೇಶವಿಷ್ಟೇ ಅವರ ತತ್ವ ಸಿದ್ಧಾಂತಗಳನ್ನ ನಾವೆಲ್ಲರೂ ರೂಡಿಸಿಕೊಳ್ಳಬೇಕು.
ಸ್ವಾತಂತ್ರ ಪರ‍್ವದಲ್ಲಿ ದಲಿತರು ಹಿಂದುಳಿದ ಸಮುದಾಯಗಳಿಗೆ ಯಾವುದೇ ಅಧಿಕಾರವಿರಲಿಲ್ಲ
ಕಡು ಬಡತನದಲ್ಲಿ ಜನಿಸಿ ದೇಶವಿದೇಶಗಳಲ್ಲಿ ಕಾನೂನಾತ್ಮಕವಾಗಿ ವಿದ್ಯಾಭ್ಯಾಸ ಮಾಡಿ ಇಂದು ಇಡೀ 136 ಕೋಟಿ ಜನ ಹಾಗೂ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನ ನೀಡಿದ್ದಾರೆ. ಅವರ ಮೂರು ತತ್ವಗಳು ಶಿಕ್ಷಣ ಸಂಘಟನೆ ಹೋರಾಟ ನಾವು ಯಾವುದೇ ಒಂದು ಅಧಿಕಾರ ಪಡೆಯಲು ಹೋರಾಟಕ್ಕೆ ಸಿದ್ಧರಾಗಿರಲು ಗ್ರಾಮದಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಆಗಬೇಕು ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಭಾರತೀಯ ಪ್ರತಿಯೊಬ್ಬ ಪ್ರಜೆಯೂ ಅವರನ್ನ ಪೂಜಿಸಿ ಗೌರವಿಸಬೇಕು ಎಂದರು.
ಇನ್ನೂ ದಲಿತ ಸಂರ‍್ಷ ಸಮಿತಿಯ ಜಿಲ್ಲಾ ಸಂಚಾಲಕ ಜಿ ಬಿ ತಿಪ್ಪೇಸ್ವಾಮಿ ಮಾತನಾಡಿ ಅಂಬೇಡ್ಕರ್ ರವರ ಆಶಯಗಳು ಈಡೇರಿದಾಗ ಮಾತ್ರ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಕ್ಕೆ ಸರ‍್ಥಕವಾಗುತ್ತದೆ ಇಂದು ನಮ್ಮ ಗ್ರಾಮದಲ್ಲಿ ಪ್ರತಿಯೊಬ್ಬರೂ ಈ ಸರಳ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಪೂಜಿಸಲ್ಲಿಸಿದ್ದೀರಿ ಎಂದು ಗ್ರಾಮದ ಪ್ರತಿಯೊಬ್ಬರಿಗೂ ಅಭಿನಂದನೆ ತಿಳಿಸಿದರು.
ಇದೇ ಸಂರ‍್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪಾಲಮ್ಮ ಜಿ ಬೋರಯ್ಯ, ಸದಸ್ಯರಾದ ಶ್ರೀಮತಿ ಪ್ರೇಮಲತಾ ಶಂಕರ್ ಮರ‍್ತಿ, ರಾಧಮ್ಮ ಬೋಜರಾಜ್, ಬಸಕ್ಕ ತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಕ ಕೆ. ಹನುಮಯ್ಯ, ಡಿ ಕೊಲ್ಲೂರಪ್ಪ, ಜಿ ಎಸ್ ತಿಪ್ಪೇಸ್ವಾಮಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಜಿ ಬಿ ತಿಪ್ಪೇಸ್ವಾಮಿ, ಕೆ ನಿಂಗಪ್ಪ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಎಸ್ ಡಿ ಎಂ ಸಿ ಅಧ್ಯಕ್ಷ ಓ ದಾಸಯ್ಯ, ವಾಲ್ಮೀಕಿ ಸಂಘದ ಮುಖಂಡರಾದ ಬಿ. ನಲಜರವಯ್ಯ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಎಚ್ ತಿಪ್ಪೇಸ್ವಾಮಿ, ಯುವ ಮುಖಂಡರಾದ ಜಿ ಆರ್ ಮಲ್ಲೇಶ್, ಟಿ. ರುದ್ರಮುನಿ, ಯಜಮಾನರು ಹಾಗೂ ಗಜ್ಜುಗಾನಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು