ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆ ಅಂಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಪೂಜಿಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವಂತ ಸಂವಿಧಾನವನ್ನ ನಮಗೆ ನೀಡಿ ಪ್ರಜಾಪ್ರಭುತ್ವದ ದೇಶವಾದ ಭಾರತಕ್ಕೆ ಸಂವಿಧಾನ ರಚನೆಯ ಮಾಡುವ ಮೂಲಕ ದೇಶಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖವಾಗಿ ಸರ್ವ ಪಾತ್ರ ವಹಿಸಿದವರು ಬಾಬಾ ಸಾಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಕನ್ನಡ ಸಮಿತಿಯ ಅಧ್ಯಕ್ಷರಾಗಿ ಮಹಾನ್ ಮಾನವತವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಖ್ಯಾತಿಯನ್ನು ಪಡೆಯುತ್ತಾರೆ ಅವರ ಕಾರ್ಯ ಸಾಧನೆಯ ಇಂದಿಗೂ ಜೀವಂತ ಗ್ರಾಮದ ಪ್ರತಿಯೊಬ್ಬರೂ ಡಾ. ಬಿ ಆರ್ ಅಂಬೇಡ್ಕರ್ ಅವರ ತತ್ವ ಆದರ್ಶವನ್ನು ರೂಡಿಸಿಕೊಳ್ಳುವ ಕೆಲಸವಾಗಬೇಕು ಡಾ. ಬಿ ಆರ್ ಅಂಬೇಡ್ಕರ್ ರವರ ಮೂರು ಸೂತ್ರಗಳನ್ನು ಶಿಕ್ಷಣ ಸಂಘಟನೆ ಹೋರಾಟ ಮೂಲಕ ಬೆಳೆದಂತವರು ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ವಿದ್ಯಾವಂತರನ್ನಾಗಿ ಮಾಡಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಇದು ವೇಳೆ ಪಟ್ಟಣ ಪಂಚಾಯತಿ ಸದಸ್ಯ ದುರುಗಪ್ಪ, ಜಾಗನೂರಹಟ್ಟಿ ಮುತ್ತಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ತಿಪ್ಪೇಸ್ವಾಮಿ, ಅಯ್ಯಣ್ಣ, ಪೆನ್ನಯ್ಯ, ಈಶ್ವರ್ ಮಾಜಿ ಗ್ರಾಮ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ, ಮಾರಪ್ಪ, ರುದ್ರಪ್ಪ ,ಮಲ್ಲೇಶ್, ಉಚ್ಚಂಗಿ, ಕೆಂಗಣ್ಣ, ರವಿ, ಅಭಿ ,ನಾಗೇಶ್, ಕಾಂತರಾಜ್ ,ತಿಪ್ಪೇಶ್ ,ಸಿದ್ದ, ಶರಣಪ್ಪ ಎಂ ತಿಪ್ಪೇಸ್ವಾಮಿ ನಾಗೇಶ್ ತಿಪ್ಪೇಸ್ವಾಮಿ ಕರಿಬಸವ ಸೇರಿದಂತೆ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು