ಚಳ್ಳಕೆರೆ : ತಾಲೂಕಿನ ಕರಿಕೆರೆ ಗ್ರಾಮದ ಕರೆಕಲ್ಲಪ್ಪ ಇವರ ಜಮೀನಿಲ್ಲಿದ್ದ ಎರಡು ಕುರಿಹಟ್ಟಿಗಳಿಗೆ ಬೆಂಕಿಬಿದ್ದು ಎರಡು ಲೋಡ್ ಕುರಿಗೊಬ್ಬರ ಹಾಗೂ ಕುರಿಶೆಡ್‌ಗಳು ಸುಟ್ಟು ಬಸ್ಮವಾಗಿವೆ ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ಜಯಣ್ಣ ಸಿಬ್ಬಂದಿಗಳೊAದಿಗೆ ಭೇಟಿ ನೀಡಿ ಬೆಂಕಿನAದಿಸುವಲ್ಲಿ ಯಶಸ್ವಿಯಾಗಿ ಹೆಚ್ಚಿನ ಅನಾವುತ ತಪ್ಪಿಸಿದ್ದಾರೆ. ಇನ್ನೂ
ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ತಾಡೂರ್ ಪ್ರಕಾಶ್ ಇವರ ವಾಸದ ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ದಿನಬಳಕೆಯ ವಸ್ತುಗಳು, ಕೃಷಿ ಪರಿಕರಗಳು ಹಾಗೂ ಒಂದು ಎತ್ತು ಬೆಂಕಿಗೆ ಸುಟ್ಟು ಕರಕಲಾಗಿದ್ದು ಮತ್ತೆರೆಡು ಎತ್ತುಗಳು ಗಾಯಗೊಂಡಿದ್ದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಹೆಚ್ಚಿನ ಅನಾವುತವನ್ನು ತಪ್ಪಿಸಿದ್ದಾರೆ.