ಚಳ್ಳಕೆರೆ : ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಮತದಾನಕ್ಕೆ ಕೇವಲ ಒಂದು ತಿಂಗಳ ಮಾತ್ರ ಗಡುವು ಇರುವುದರಿಂದ ಚುನಾವಣೆ ಆಯೋಗ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿ ಗಳ ಮೇಲೆ ಹದ್ದಿನ ಕಣ್ಣು ಇಟ್ಟು ಚುನಾವಣೆಯಲ್ಲಿ ಅಕ್ರಮ ಎಸಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಅದೇ ರೀತಿಯಲ್ಲಿ ಮಧ್ಯಕರ್ನಾಟಕ ಭಾಗದ ಆಯಿಲ್ ಸಿಟಿ ಚಳ್ಳಕೆರೆ ಕ್ಷೇತ್ರದ ಆಂದ್ರಪ್ರದೇಶದ ಗಡಿಯನ್ನು ಹಂಚಿಕೊಂಡಿರುವುದರಿಂದ ಮತದಾರರಿಗೆ ಅಕ್ರಮವಾಗಿ ಹಣ, ಹಾಗೂ ಇನ್ನಿತರೆ ವಸ್ತುಗಳ ಆಮಿಶ ಒಡ್ಡಬಾರದು ಎಂದು ಈ ಕ್ಷೇತ್ರದಲ್ಲಿ ಸುಮಾರು ಆರು ಕಡೆ ಚೆಕ್ ಪೋಸ್ಟ್ ಗಳನ್ನು ತೆರೆದು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಇನ್ನೂ ಚಳ್ಳಕೆರೆ ಕ್ಷೇತ್ರದಲ್ಲಿ ಹಲವು ಬಾರಿ ವಿವಿಧ ಚುನಾವಣೆಗಳನ್ಬು ಸುಲಲಿತವಾಗಿ ಎದುರಿಸಿದ ಅನುಭವ ಈ ದಕ್ಷ ಅಧಿಕಾರಿ ಬಿ.ಆನಂದ್ ರವರಿಗೆ ಇದೆ.

ಇನ್ನೂ ಕ್ಷೇತ್ರದ ಅಷ್ಟ ದಿಕ್ಕುಗಳಲ್ಲಿ ಕ್ಷೇತ್ರಕ್ಕೆ ಯಾವುದೇ ತರಹ ಅಕ್ರಮ ನುಸಳದಂತೆ
ಆಂದ್ರಪ್ರದೇಶದ ಗಡಿ ಭಾಗದ ಜಾಜೂರು ಸಮೀಪದಲ್ಲಿ ನಿರ್ಮಿಸಿದ ಚೆಕ್ ಪೋಸ್ಟ್, ನಾಗಪ್ಪನಹಳ್ಳ ಗೇಟ್ ಬಳಿ ನಿರ್ಮಿಸಿದ ಚೆಕ್ ಪೋಸ್ಟ್, ಹಾಗೂ ಹಿರಿಯೂರು ಮಾರ್ಗದ ರೋಜ ಡಾಬಾ ಬಳಿ ನಿರ್ಮಿಸಿದ ಚೆಕ್ ಪೋಸ್ಟ್, ಬೋಗಳರಹಟ್ಟಿ ಬಳಿ ನಿರ್ಮಿಸಿದ ಚೆಕ್ ಪೋಸ್ಟ್, ಚಿತ್ರದುರ್ಗ ಮಾರ್ಗದ ಕೆಇಬಿ ಬಳಿ ನಿರ್ಮಿಸಿದ ಚೆಕ್ ಪೋಸ್ಟ್, ನಾಯಕನಹಟ್ಟಿ ಕ್ರಾಸ್ ಬಿಳಿ ನಿರ್ಮಿಸಿದ ಚೆಕ್ ಪೋಸ್ಟ್ ಗೆ ತಡ ರಾತ್ರಿ ಚುನಾವಣೆ ಅಧಿಕಾರಿ ಬಿ.ಆನಂದ್ ಹಾಗೂ ತಹಶಿಲ್ದಾರ್ ರೋಹನ್ ಪಾಷ ಮಧ್ಯೆ ರಾತ್ರಿ 2 ಗಂಟೆ ಸುಮಾರಿಗೆ ಚೆಕ್ ಪೋಸ್ಟ್ ಬಳಿ ದಾವಿಸಿ ವಾಹನ ತಪಾಸಣೆ ಕಾರ್ಯಚರಣೆ ನಡೆಸಿದ್ದಾರೆ.

ಅದರಂತೆ ಕ್ಷೇತ್ರದಲ್ಲಿ
ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾ ಕೇಂದ್ರದಿಂದ ವಿದ್ಯುನ್ಮಾನ ಮತಯಂತ್ರ ಗಳನ್ನು ನಗರದ ಹೆಚ್ ಪಿಪಿಸಿ ಕಾಲೇಜಿನ ಭದ್ರತಾ ಕೋಠಡಿಯಲ್ಲಿ ಪೊಲೀಸ್ ಸರ್ಪಗಾವನಲ್ಲಿ ಗುರುವಾರ ಸಂಜೆ ಶೇಖರಣೆ ಮಾಡಿದ್ದಾರೆ.

ಇನ್ನೂ ಕ್ಷೇತ್ರದ ರಾಜಾಕೀಯ ಪಕ್ಷಗಳಾದ ಕಾಂಗ್ರೇಸ್ , ಜೆಡಿಎಸ್ , ಬಿಜೆಪಿ. ಸೇರಿದಂತೆ ವಿವಿಧ ಪಕ್ಷದ ಮುಖಂಡರೊಂದಿಗೆ ಪರಿಶೀಲನೆ ನಡೆಸಿ 311 ಬ್ಯಾಲೆಟ್ ಯ್ಯುನಿಟ್, 311 ಕಂಟ್ರೋಲ್ ಯುನಿಟ್ , 337 ವಿವಿ ಪ್ಯಾಟ್‌ಗಳನ್ನು ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳನ್ನು ಶೇಖರಿಸಲಾಗಿದ್ದು, ಬಿಗಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಪ್ರತಿಯೊಂದು ಯಂತ್ರವನ್ನು ಪರೀಶಿಲಿಸಿ ಮುದ್ರೆ ಹಾಕಲಾಗಿದೆ ಭದ್ರತಾ ಕೊಠಡಿಯಲ್ಲಿ ಮತಗಟ್ಟೆವಾರು ಇವಿಎಂಗಳನ್ನು ಗುರುತು ಮಾಡಿ ಸುರಕ್ಷಿತವಾಗಿರಿಸಲಾಗಿದೆ.
ಭಾರತ ಚುನಾವಣಾ ಆಯೋಗ ಮಾರ್ಗಸೂಚಿಯನ್ವಯ ಪೊಲೀಸ್ ಭದ್ರತೆಯಲ್ಲಿ ಚುನಾವಣಾ ಅಭ್ಯರ್ಥಿಗಳೆದುರು ಇವಿಎಂಗಳ ಮುದ್ರೆ ತೆರೆದು ಬ್ಯಾಲೆಟ್ ಯೂನಿಟ್ ನಮೂನೆಯನ್ನು ಸೇರಿಸಿ ಮತ್ತೊಮ್ಮೆ ಅವುಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಅವುಗಳ ಕಾರ್ಯವಿಧಾನದ ಬಗ್ಗೆಯೂ ತೋರಿಸಲಾಗುವುದು ಎನ್ನಲಾಗಿದೆ.

ಭದ್ರತಾ ಕೊಠಡಿಯಲ್ಲಿ ಮತ್ತು ಒಳ ಹಾಗೂ ಹೊರ ಆವರಣ ಸುತ್ತ ಮುತ್ತ ವಿದ್ಯುತ್ ದೀಪಗಳನ್ನು ಅಳವಡಿಸಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿದೆ., ಅಲ್ಲಿಯೇ ಇರುವ ಎಲೆಕ್ಟ್ರಿಕಲ್ ಕಂಟ್ರೋಲ್ ರೂಂ ನಲ್ಲಿ ಕ್ಯಾಮರಾದಲ್ಲಿ ಸೆರೆಯಾಗುವ ದೃಶ್ಯಾವಳಿ ಯನ್ನು ವೀಕ್ಷಿಸಿ, ನಿಗಾ ವಹಿಸಲಾಗುವುದು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದ್ದಾರೆ.

ಪ್ರತೀದಿನ ಪೊಲೀಸ್ ಅಧಿಕಾರಿಗಳು , ಚುನಾವಣೆ ಅಧಿಕಾರಿಗಳು ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಮೇಲ್ವೀಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಸಹಾಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಹಾನ್ ಪಾಷ, ಚಳ್ಳಕೆರೆ ಠಾಣೆಯ ಪಿಐ ಆರ್.ಎಫ್, ದೇಸಾಯಿ, ಪಿಎಸ್‌ಐ ಸತೀಶ್ ನಾಯ್ಕ. ಚುನಾವಣೆ ಶಾಖೆಯ ಪ್ರಕಾಶ್, ಶ್ರೀಧರ್, ಭಾಷ. ಓಬಳೇಶ್. ಅರೆಸೇನೆ, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!