ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಕೀಯ ರಂಗಿನ ಆಟ ಶುರುವಾಗಿದೆ
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವರ್ಚಸ್ಸು ಕೂಡ ಎಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ
ಇನ್ನೂ ರಾಜ್ಯಾದ್ಯಂತ ಸಂಚರಿಸುವ ಜೆಡಿಎಸ್ ಪಕ್ಷದ ಪಂಚ ರತ್ನ ರಥ ಯಾತ್ರೆ ಏ.9 ರಂದು ಕ್ಷೇತ್ರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಈಡಿ ಕ್ಷೇತ್ರದಲ್ಲಿ ಭರ್ಜರಿ ತಯಾರಿಕೂಡ ಭರದಿಂದ ಸಾಗುತ್ತಿದೆ.
ಅದರಂತೆ ತುರುವನೂರು ಹೋಬಳಿ ಯಲ್ಲಿ ಪ್ರಾರಂಭವಾಗುವ ಪಂಚರತ್ನ ರಥಯಾತ್ರೆಗೆ ರಾಜ್ಯದ ಗಣ್ಯರ ಬಾಗಿಯಾಗುವ ಹಿನ್ನಲೆಯಲ್ಲಿ ರಾಜ್ಯ ನಾಯಕರ ಹೆಲಿಪ್ಯಾಡ್ ಸಿದ್ದತೆ ನಡೆಯುತ್ತಿದೆ.
ಇನ್ನೂ ಸಾವಿರಾರು ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಸೇರುವ ನಿರೀಕ್ಷೆಯಿಂದ ಹೆಲಿಪ್ಯಾಡ್ ನಲ್ಲಿ ಪೂರ್ವ ಸಿದ್ದತೆಗಳು ಹಾಗೂ ಕುಡಿಯುವ ನೀರು ವಾಹನಗಳ ಪಾರ್ಕಿಂಗ ವ್ಯವಸ್ಥೆ, ಈಗೇ ಎಲ್ಲಾ ಸಿದ್ಧತೆಗಳನ್ನು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಪರಿಶೀಲನೆ ನಡೆಸಿದರು.