ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಅದರಂತೆ ಚಳ್ಳಕೆರೆ ಕ್ಷೇತ್ರ ಈಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಮುಖ್ಯತೆ ವಹಿಸಿದ ಕ್ಷೇತ್ರವಾಗಿದೆ. ಇನ್ನೂ ಈಡೀ ಜಿಲ್ಲೆಯಲ್ಲಿ ತನ್ನ ಪಾರುಪತ್ಯ ಹೊಂದಿದ ಏಕೈಕ ಕ್ಷೇತ್ರದ ಚಳ್ಳಕೆರೆಯಾಗಿದೆ ಈಡೀ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಆಳ್ವಿಕೆ ಮಾಡುವ ಹಾಲಿ ಶಾಸಕರು, ಮಾಜಿ ಶಾಸಕರು ಆಯಿಲ್ ಸಿಟಿ ಚಳ್ಳಕೆರೆ ಕ್ಷೇತ್ರದವರು ಎಲ್ಲಾಗಿದೆ
ಅದರಂತೆ ಮಾಜಿ ಸಚಿವರ ಪುತ್ರ ಕೆ.ಟಿ.ಕುಮಾರಸ್ವಾಮಿ ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿ ಯಿಂದ ಟಿಕೆಟ್ ಪಡೆದು ಕಡಿಮೆ ಮತಗಳಿಂದ ಪರಾಭವಗೊಂಡಿದ್ದರು ಆದರೆ ಈಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಈ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.
ಅದರಂತೆ ಚಳ್ಳಕೆರೆ ಕ್ಷೇತ್ರದ ಶ್ರೀಪೆದ್ದಮ್ಮ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಗಂಜಿಗುAಟೆ ಲಂಬಾಣಿ ಹಟ್ಟಿಗೆ ಭೇಟಿ ನೀಡಿ ದೇವರ ಆರ್ಶಿವಾದ ಪಡೆದರು, ನಂತರ ಗರಿಬ್‌ಸ್ವಾಮಿ ಮಠದಲ್ಲಿ ರೈತ ಸಂಘದಿAದ ಏರ್ಪಡಿಸಿಲಾಗಿದ್ದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು,
ನಂತರ ಪರುಶುರಾಂಪುರ ಹೋಬಳಿಯ ಜಾಜೂರು ಗ್ರಾಮದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ದೇವರ ಆರ್ಶಿವಾದ ಪಡೆದರು.