ಚಳ್ಳಕೆರೆ : ರೈತರ ಮೊಗದಲ್ಲಿ ಸಂತಸ ಮೂಡಿಸುವ ನೂತನ ಮೆಕ್ಕೆಜೋಳದ ಸಿರಿ ಸೀಡ್ಸ್ ತಳಿ ಇಂದು ಮಧ್ಯ ಕರ್ನಾಟಕದ ಭಾಗದಲ್ಲಿ ಬೇಸಿಗೆ ಕಾಲದ ತಾಪಮಾನದಲ್ಲಿ ಉತ್ತಮ ಇಳುವರಿ ಬಂದಿರುವುದು ಸಂತಸ ತಂದಿದೆ ಎಂದು ಸಿರಿ ಸೀಡ್ಸ್ ನ ಮ್ಯಾನಜರ್ ಶಶಿಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ಸಿರಿ ಪ್ರೆವೈಟ್ ಲಿಮಿಟೆಡ್ ಕಂಪನಿಯಿAದ ಪ್ರಗತಿ ಪರ ರೈತ ಪ್ರಬಣ್ಣ ರವರ ತೋಟದಲ್ಲಿ ಆಮ್ಮಿಕೊಡಿದ್ದ ಸೀರಿ ಸೀಡ್ಸ್ ತಳಿಯ ಪ್ರಯೋಗಿಕ ಬೆಳೆ ಪರೀಕ್ಷಣಾ ಕಾರ್ಯಗಾರದಲ್ಲಿ ಸುಮಾರು ರೈತರೊಟ್ಟಿಗೆ ಸಿರಿ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಿರಿ ಸೀಡ್ಸ್ನ್ನು ಆ ಭಾಗದ ಎಲ್ಲಾ ರೈತರಿಗೆ ಪರಿಚಯಿಸಿದರು.
ಕಳೆದ ತಿಂಗಳುಗಳಲ್ಲಿ ಪ್ರಯೋಗಿಕವಾಗಿ ಸಿರಿ ಸೀಡ್ಸ್ನ ರೈಡರ್ ಎಂಬ ನೂತನ ತಳಿಯ ಮೆಕ್ಕೆಜೋಳದ ಬೀಜವನ್ನು ರೈತ ಪ್ರಬಣ್ಣ ಬಿತ್ತನೆ ಮಾಡಿದ್ದಾನೆ ಆದರೆ ಈಗ ಅದು ಹುಲಸಾಗಿ ಬೆಳೆದು ಉತ್ತಮ ಬೆಳೆ ಬಂದಿದೆ. ಕಳೆದ ವರ್ಷ ಮಧ್ಯ ಕರ್ನಾಟಕ ಭಾಗಕ್ಕೆ ಕಾಲಿಟ್ಟ ಸಿರಿ ಸೀಡ್ಸ್ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚಿನ ರೈತರ ಬದುಕಿನ ಉತ್ತಮ ಇಳುವರಿ ನೀಡುವ ಉತ್ತಮ ತಳಿಯಾಗಿದೆ, ಇನ್ನೂ ಮೊಟ್ಟ ಮೊದಲ ಬಾರಿಗೆ ಆಂದ್ರ ಪ್ರದೇಶದ ಹೈದರಬಾದಿನಿಂದ ಬೆಣ್ಣೆ ನಗರಿ ದಾವಣಗೆರೆಗೆ ಬಂದ ಈ ಸಿರಿ ಸೀಡ್ಸ್ ತಳಿ ಈಡೀ ರಾಜ್ಯ ವ್ಯಾಪ್ತಿ ಹಬ್ಬಿ ಉತ್ತಮ ಇಳುವರಿ ನೀಡುವಲ್ಲಿ ಯಶ್ವಸಿಯಾಗಿದೆ.
ಇನ್ನೂ ಸಿರಿ ಸೀಡ್ಸ್ನ ಕಂಪನಿಯ ಮ್ಯಾನೆಜರ್ ಸೋಮಶೇಖರ್ ಮಾತನಾಡಿ, ಈ ತಳಿಯುವ ಉತ್ತಮವಾಗಿದ್ದು ಎಲ್ಲಾ ಕಾಲ ಮಾನಕ್ಕೂ ಭಿತ್ತನೆ ಮಾಡುವಂತ ಸೀಡ್ಸ್ ಈದಾಗಿದೆ ಇನ್ನೂ ಅತೀ ಕಡಿಮೆ ರೋಗ ಲಕ್ಷಣ ಹೊಂದಿರುವ ಈ ಬೀಜ ರೈತನಿಗೆ ವರದಾನವಾಗಿದೆ, ಸೊಮಗುತ್ತು ಗ್ರಾಮದ ರೈತ ಕೇವಲ 2.ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾನೆ ಆದರೆ ಈಗ ಕೇವಲ ಒಂದು ಎಕರೆಗೆ ಸು 35 ಕಿಂಟ್ವಾಲ್ ಮೆಕ್ಕೆಜೋಳ ಬೆಳೆದಿದ್ದಾನೆ ಆದ್ದರಿಂದ ಸಿರಿ ಸೀಡ್ಸ್ ರೈತನಿಗೆ ತುಂಬಾ ಇಳುವರಿ ನೀಡುವ ಪ್ರಮುಖವಾದ ಮೆಕ್ಕೆಜೋಳದ ಬೀಜವಾಗಿದೆ ಎಂದರು.
ಈದೇ ಸಂಧರ್ಭದಲ್ಲಿ ಪ್ರಗತಿ ಪರ ರೈತ ಪ್ರಬಣ್ಣ, ಸಿರಿ ಸೀಡ್ಸ್ ಕಂಪನಿ ಸಿಬ್ಬಂದಿಯಾದ ಚನ್ನಗಾನಹಳ್ಳಿ ಮಾರಣ್ಣ, ಮಂಜುನಾಥ್, ಪ್ರಕಾಶ್, ವಿಶ್ವನಾಥ್, ಹಾಗೂ ಗ್ರಾಮದ ಹಲವು ರೈತರು ಭಾಗವಹಿಸಿದ್ದರು.
ಪೋಟೋ. ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ಸಿರಿ ಪ್ರೆವೈಟ್ ಲಿಮಿಟೆಡ್ ಕಂಪನಿಯಿAದ ರೈತ ಪ್ರಬಣ್ಣ ತೋಟದಲ್ಲಿ ಸೀರಿ ಸೀಡ್ಸ್ ತಳಿಯ ಪ್ರಯೋಗಿಕ ಬೆಳೆ ಪರೀಕ್ಷಣಾ ಕಾರ್ಯಗಾರ ನಡೆಸಿದರು.