ಚಳ್ಳಕೆರೆ : ಚುನಾವಣೆ ಸಂಧರ್ಭದಲ್ಲಿ ಎಲ್ಲಾ ಹಂತ ಅಧಿಕಾರಿಗಳು ಹಗಲು ರಾತ್ರಿ, ಹಾಗೂ ಭಾನುವಾರ ರಜೆ ದಿನ ಎನ್ನದೆ ಚುನಾವಣೆ ಕೆಲಸ ಮಾಡಬೇಕು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಟ್ಟಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಚುನಾವಣೆ ಪ್ರಕ್ರಿಯೆ ಮುಗಿಯವರೆಗೆ ಅಧಿಕಾರಿಗಳು ತಪ್ಪದೆ ತಮ್ಮ ಕರ್ತವ್ಯ ನಿರ್ವಹಿಸಬೇಕು, ಅದರಂತೆ ನೂತನವಾಗಿ ಆದೇಶಿಸಿರುವ ಚುನಾವಣೆ ಸಂಧರ್ಭದಲ್ಲಿ 80 ವರ್ಷ ಮೇಲ್ಪಟ್ಟ ಮತದಾರರನ್ನು ಗುರುತಿಸಿ ಅವರ ಮತದಾನ ಪ್ರಕ್ರಿಯೆಗೆ ಒಪ್ಪಿಗೆ ಪಡೆಯಬೇಕು
ಅವರ ಮನೆಗೆ ಹೋಗಿ ಅವರು ಮನೆಯಿಂದಲೇ ಮತ ಚಲಾಯಿಸಲು ಬಯಸುತ್ತಾರೆಯೇ ಅಥವಾ ಮತಗಟ್ಟೆಗೆ ಮತ ಚಲಾಯಿಸಲು ಬರಿತ್ತಾರೆಯೇ ಎಂಬ ಬಗಗ್ಗೆ ಒಪ್ಪಿಗೆ ಪತ್ರದ ನಮೂಗೆ ಸಹಿ ಪಡಿಯಬೇಕು.
ಒಪ್ಪಿಗೆ ಪತ್ರ ಪಡೆಯಲು ಸಹಿ ಮಾಡಿಕೊಂಡು ಬರಲು ಒಬ್ಬರ ಮನೆ ಬಳಿಗೆ ಎರಡು ಬಾರಿ ಮಾತ್ರ ಅವಕಾಶವಿದ್ದು ಅಷ್ಟರಲ್ಲೇ ಒಪ್ಪಿಗೆ ಪತ್ರದಲ್ಲಿ ಮತಗಟ್ಟೆ ಅಥವಾ ಮನೆಯಲ್ಲಿ ಎಂಬುದನ್ನು ಒಪ್ಪಿ ಪತ್ರದಲ್ಲಿ ಸಹಿ ಪಡೆದು ಸಂಜೆ ೫ ಗಂಟೆಯೊಳಗೆ ವರದಿ ನೀಡುವಂತೆ ತಿಳಿಸಿದರು.
೮೦ ವರ್ಷದವರು ಮೃತಪಟ್ಟಿದ್ದರೆ ಅಂತವರನ್ನು ಮೃತ ಎಂದು ನಮೂಧಿಸಿ ಕುಟುಂಬಸ್ಥರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳ ಬೇಕು ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ೮೦ ವರ್ಷ ಮೇಲ್ಪಟ್ಟ ಜನರು ಮತ್ತು ಅಂಗವಿಕಲ ವ್ಯಕ್ತಿಗಳು ಮನೆಯಿಂದ ಮತ ಚಲಾಯಿಸಲು ಅನುವು ಮಾಡಿಕೊಡುವ ಕ್ರಮ ತೆಗೆದುಕೊಂಡಿದೆ ನಿಖರವಾದ ಮಾಹಿತಿ ನೀಡುವಂತೆ ತಿಳಿಸಿದರು.
ಬಾಕಿ ವೇತನಕ್ಕೆ ಒತ್ತಾಯ :
ತಾಲ್ಲೂಕಿನಲ್ಲಿ ಕೊರೊನಾ ಸಂದರ್ಭದಲ್ಲಿ ನಮ್ಮ ಪ್ರಾಣ ಹಂಗುತೊರೆದು ಮನೆ ಮನೆಗೆ ಭೇಟಿ ನೀಡಿ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ ಮಾಡಿರುವ ಸಂಭಾವನೆ ಹಾಗೂ ರಜೆಯ ದಿನಗಳಲ್ಲಿ ಮಾಡಿದ ಇಎಲ್ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ನೀಡಿಲ್ಲ,
ಇನ್ನೂ
೨೦೨೧ರಿಂದ ಮತ ಪರಿಷ್ಕರಣೆ ಮಾಡಿದ ಮತದಾರರ ಗುರುತಿನ ಚೀಟಿಗಳು ಬಾರದೆ ಇರುವುದರಿಂದ ಮತದಾರರು ನಮ್ಮನ್ನು ಕೇಳುತ್ತಿದ್ದಾರೆ ಅಂಚೆ ಮೂಲಕ ಕಳಿಸಿದ್ದೇವೆ ಎನ್ನುತ್ತಾರೆ ಅಂಚೆ ಇಲಾಖೆಯವರು ವಿತರಣೆ ಮಾಡಿಲ್ಲ ಸಂಭವಾನೆ ಕೆಲವರಿಗೆ ಬಂದರೆ ಇನ್ನು ಕೆಲವರಿಗೆ ಬಂದಿಲ್ಲ ಕೂಡಲೆ ನಮ್ಮ ಸಮ್ಯೆಗೆ ಪರಿಹಾರ ನೀಡುವಂತೆ ಚುನಾವಣಾಧಿಕಾರಿಗಳ ಗಮನ ಸೆಳೆದರು.
ಇದೇ ಸಂಧರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ,ತಹಶೀಲ್ದಾರ್ ರೇಹಾನ್ ಪಾಷ, ಸೆಟ್ಟರ್ ಅಧಿಕಾರಿಗಳ ಹಾಗೂ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.