ಗರ‍್ಲತ್ತು ಗ್ರಾಮದ ವ್ಯಕ್ತಿ ಅನುಮಾನಸ್ಪಾದ ಸಾವು
ಆತಂಕಗೊAಡ ಕಲಮರಹಳ್ಳಿ ಗ್ರಾಮಸ್ಥರು,
ಚಳ್ಳಕೆರೆ : ಬೆಂಕಿಯಲ್ಲಿ ಸುಟ್ಟ ಸ್ಥಿತಿಯಲ್ಲಿ 45 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದ್ದು ಎರಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಚಳ್ಳಕೆರೆ ತಾಲೂಕಿನ ಗೊರ್ಲತ್ತು ಹಾಗೂ ಕಲಮರಹಳ್ಳಿ ಮಧ್ಯದ ಕಲ್ಕು ಬಂಡೆ ಹತ್ತಿರ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸುಮಾರು ಎರಡು ದಿನಗಳ ಇಂದೆ ಯಾರೋ ಕಿಡಿಗೇಡಿಗಳು ಕೊಲೆ ಮಾಡಿ ಇಲ್ಲಿಗೆ ತಂದು ಹಾಕಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಗೊಲ್ಲತ್ತು ಗ್ರಾಮದ ಶಂಕರಪ್ಪ 45 ವರ್ಷ ಎಂದು ವ್ಯಕ್ತಿಯನ್ನು ಗುರುತಿಸಿದ ಗ್ರಾಮಸ್ಥರು.
ಎರಡು ದಿನಗಳ ಹಿಂದೆ ವ್ಯಕ್ತಿ ಕಾಣೆಯಾಗಿದ್ದು.ಕಾಣೆಯಾಗಿದ್ದ ವ್ಯಕ್ತಿ ಬಂಡೆ ಹತ್ತಿರ ಶವದ ರೂಪದಲ್ಲಿ ಪತ್ತೆಯಾಗಿದ್ಸು ಗೊರ್ಲತ್ತು ಹಾಗೂ ಕಲಮರಹಳ್ಳಿಯ ಜನ ಬೆಚ್ಚಿ ಬಿದ್ದಿದ್ದಾರೆ. ಮೃತವ್ಯಕ್ತಿ ಶವ ಈಗಾಗಲೆ ಕೊಳೆತ ದುರ್ವಾಸನೆ ಸ್ಥಿತಿಗೆ ತಲುಪಿದೆ.
ಶವವನ್ನು ಗುರುತಿಸಿದ ಗ್ರಾಮಸ್ಥರು ಪೋಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ..ಪೋಲೀಸ್ ತನಿಖೆ ನಂತರವೆ ಕೊಲೆಯೊ ಅಥವಾ ಆತ್ಮಹತ್ಯೆ ಎಂಬುದು ತಿಳಿಯಬೆಕಿದೆ.