ಈಡೀ ರಾಜ್ಯದಲ್ಲಿ ಏಕಕಾಲಕ್ಕೆ

ವಿಧಾನಸಭೆ ಚುನಾವಣಾ

ನೀತಿ ಸಮಿತಿ ಜಾರಿ

ಚಳ್ಳಕೆರೆ : ಈಡೀ ರಾಜ್ಯದಲ್ಲಿ ಏಕಕಾಲಕ್ಕೆ ವಿಧಾನಸಭೆ ಚುನಾವಣಾ ನೀತಿ ಸಮಿತಿಯ ಜಾರಿಯಾಗಿದ್ದು ಚಿನ್ನ ಬೆಳ್ಳಿ ಜ್ಯುವೆಲರಿ ವರ್ತಕರು ಚಿನ್ನ ಕರೆದಿ ಬೆಳ್ಳಿ ಖರೀದಿಗೆ ಬೇರೆ ಊರಿಗೆ ಹೋದರೆ ನಿಮ್ಮ ಕಾರನ್ನು ತಡೆಹಿಡಿದು ವಾಹನ ಹಾಗೂ ಚಿನ್ನ ಬೆಳ್ಳಿ ಹಣವನ್ನು ಸಿಜ್ ಮಾಡುತ್ತಾರೆ
ಆದ್ದರಿಂದ ಚಿನ್ನ ಬೆಳ್ಳಿ ವರ್ತಕರು ಅಕೌಂಟ್ ಥ್ರೂ ವ್ಯವಹಾರಗಳನ್ನು ಮಾಡಿದರೆ ಬಹಳ ಒಳ್ಳೆಯದು ಎಂದು ಚುನಾವಣೆ ಇಲಾಖೆಯ ಅಧಿಕಾರಿ ಬಿ ಆನಂದ್ ತಿಳಿಸಿದರು,
ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ ಚುನಾವಣಾ ನೀತಿ ಸಂಹಿತೆ ಕಾನೂನಿನ ಅರಿವನ್ನು ಮೂಡಿಸಲು ಜುವೆಲರಿ ವರ್ತಕರಿಗೆ ಮಾಹಿತಿ ನೀಡಿ ಮಾತನಾಡಿದರು, ಜ್ಯುವೆಲರಿ ವರ್ತಕರು ಚುನಾವಣಾ ನೀತಿ ಸಮಿತಿಯನ್ನು ಮೊದಲು ಹರಿಯಬೇಕು ನೀವು ಎಷ್ಟೇ ಹಣವನ್ನು ತೆಗೆದುಕೊಂಡು ಹೋಗಿ ವ್ಯವಹಾರ ಮಾಡಿ ಅಕೌಂಟ್ ಥ್ರೂ ವ್ಯವಹಾರ ನಡೆಸಿದರೆ ಮಾತ್ರ ಒಳ್ಳೆಯದು ಎಂದರು.
ಹಣವನ್ನು ತೆಗೆದುಕೊಂಡು ಹೋಗಿ ಒಡವೆಗಳನ್ನು ತರುವ ಸಮಯದಲ್ಲಿ ಜಿಎಸ್‌ಟಿ ಬಿಲ್ ಹಾಕಿಸಿಕೊಂಡು ಟ್ಯಾಕ್ಸ್ ಪೇಯ ರಶೀದಿಯನ್ನು ತಂದರೆ ನಾವು ನಿಮ್ಮನ್ನು ಹಿಡಿಯಲು ಸಾಧ್ಯವಿಲ್ಲ ನೀವು ಏಕಾಏಕಿ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಖರೀದಿ ಮಾಡಿ ಒಡವೆಯನ್ನು ತರುವ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಸಿಕ್ಕಿ ಬಿದ್ದರೆ ಕಾನೂನಿನ ಪ್ರಕಾರ ನಿಮ್ಮ ಒಡವೆ ಹಣವನ್ನು ಸಿಜ್ ಮಾಡಲಾಗುವುದು ಇದರಿಂದಾಗಿ ತಾಲೂಕಿನಾದ್ಯಂತ ಚಿನ್ನ ಬೆಳ್ಳಿ ವರ್ತಕರು ಅಕೌಂಟ್ ಟ್ರೂ ವ್ಯವಾರ ಮಾಡಿ ಕಾನೂನಿನ ನಿಯಮವನ್ನು ಕಾಪಾಡಿ ಎಂದು ತಿಳಿಸಿದರು,

ಇನ್ನು ಈ ವೇಳೆ ತಾಲೂಕು ದಂಡಾಧಿಕಾರಿ ರೆಹಾನ್ ಪಾಷಾ, ಅಬಕಾರಿ ನಿರೀಕ್ಷಕ ನಾಗರಾಜ್, ಚಿನ್ನಬಳ್ಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಆಚಾರ್, ಶೈಲೇಂದ್ರ ಚಾರ್, ಶಶಿಧರ್ ಆಚಾರ್ ,ಪ್ರಸನ್ನ ಕುಮಾರ್ , ಮಂಜುನಾಥ್ ಆಚಾರ್ , ಶ್ರೀಧರ್ ಆಚಾರ್, ರಮೇಶ್ ಆಚಾರ್, ಆಂಕರ್ ಶ್ರೀನಿವಾಸ್ ಸೇರಿದಂತೆ ಚಿನ್ನ ಬೆಳ್ಳಿ ವರ್ತಕರು ಹಾಜರಿದ್ದರು

About The Author

Namma Challakere Local News
error: Content is protected !!