ನೀತಿ ಸಂಹಿತೆ ಜಾರಿ ಚೆಕ್ ಪೋಸ್ಟ್ ತಪಸಾಣೆ

ಚಳ್ಳಕೆರೆ ಕ್ಷೇತ್ರದಲ್ಲಿ 7 ಚೆಕ್ ಪೋಸ್ಟ್

ಚಳ್ಳಕೆರೆ : ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುಣಾವಣೆ ಅಧಿಕಾರಿಗಳು ಚೆಕ್ ಪೋಸ್ಟ್ಗಳಲ್ಲಿ ಬಿಗಿ ಭದ್ರತೆ ಮಾಡಿದ್ದಾರೆ, ಅದೇ ರೀತಿಯಲ್ಲಿ ಚುನಾವಣೆ ಸಂಧರ್ಭದಲ್ಲಿ ಅಕ್ರಮ ಎಸಗುವ ಅಕ್ರಮ ದಂಧೆಕೋರರನ್ನು ಮಟ್ಟ ಹಾಕಲು ಇನ್ನಿಲ್ಲದ ಕಸರತು ಅಧಿಕಾರಿಗಳು ನಡೆಸುತ್ತಿದ್ದಾರೆ.
ಆದರಂತೆ ಈಡೀ ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ವಾಹನಗಳ ತಪಸಾಣೆ ಕಾರ್ಯಚರಣೆ ಭರ್ಜರಿಯಾಗಿ ನಡೆಸುತ್ತಿದ್ದಾರೆ.
ಅದರಂತೆ ಬಯಲು ಸೀಮೆಯ ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರ ಆಂದ್ರದ ಗಡಿ ಭಾಗದಲ್ಲಿ ಇರುವುದರಿಂದ ರಾಜ್ಯಕ್ಕೆ ಅಕ್ರಮ ಎಸಗುವವರು ಹೊರ ರಾಜ್ಯದಿಂದ ಈದೇ ಚಳ್ಳಕೆರೆ ಕ್ಷೇತ್ರದ ಮಾರ್ಗ ಬಳಕೆ ಮಾಡಿಕೊಳ್ಳಬೇಕು ಆದ್ದರಿಂದ ಗಡಿ ಭಾಗವಾದ ಚಳ್ಳಕೆರೆಯಲ್ಲಿ ಚುನಾವಣೆ ಅಧಿಕಾರಿ ಬಿ.ಆನಂದ್‌ರ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಸುಮಾರು 7 ಚೆಕ್ ಪೋಸ್ಟ್ಗಳನ್ನು ತೆರೆದು ನಿರಂತರ ಕಾರ್ಯಚರಣೆ ಮಾಡುತ್ತಿದ್ದಾರೆ.
ಇನ್ನೂ ಚಳ್ಳಕೆರೆ ಕ್ಷೇತ್ರದ ಚಿತ್ರದುರ್ಗ ಮಾರ್ಗದ ಚಳ್ಳಕೆರೆ ಟೋಲ್ ಗೇಟ್ ಬಳಿ ಇರುವ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ. ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಜಿಲ್ಲಾ ಮುಖ್ಯ ಕಾರ್ಯನಿರ್ವಾಣಧಿಕಾರಿ ಎಂ.ಎಸ್.ದಿವಕರ್, ಚುನಾವಣೆ ಅಧಿಕಾರಿ ಬಿ.ಆನಂದ್, ತಹಶೀಲ್ದಾರ್ ರೇಹಾನ್ ಪಾಷ, ಇತರೆ ಸಿಬ್ಬಂದಿ ವರ್ಗ ಗಡಿಭಾಗದ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಕ್ಷೇತ್ರದ ಹಲವು ಚೆಕ್ ಪೋಸ್ಟ್ಗಳಲ್ಲಿ ಸಾರ್ವಜನಿಕರ ವಾಹನಗಳನ್ನು ತಪಾಸಣೆ ಮಾಡಿದರು.

Namma Challakere Local News
error: Content is protected !!