ನಾಯಕನಹಟ್ಟಿ ::ಪಟ್ಟಣದ ಪಟ್ಟಣ ಪಂಚಾಯತಿಯಲ್ಲಿ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳ ರಕ್ಷಣಾ ಸಮಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ದೇಶಕ್ಕೆ ಮಕ್ಕಳೇ ಸರ್ವಸ್ವ ಈಗಿನ ಮಕ್ಕಳು ಮುಂದಿನ ದಿನದಲ್ಲಿ ದೇಶವನ್ನು ಮುನ್ನಡೆಸುವ ನಾಯಕ ರಾಗಬಹುದು ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನವನ್ನು ನೀಡಲು ಪೋಷಕರು ಮುತುವರ್ಜಿ ವಹಿಸಬೇಕು. ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದು, ಮಕ್ಕಳನ್ನು ದುಡಿಮೆಗೆ ಹಚ್ಚುವುದು, ಅಪರಾಧ. ಮಕ್ಕಳ ಮಾರಾಟದ ಬಗ್ಗೆ ಮಕ್ಕಳ ಪೋಷಣೆಯ ಬಗ್ಗೆ ಬಾಲ ಕಾರ್ಮಿಕರ ಬಗ್ಗೆ ಆ ರಕ್ಷಣೆಗಾಗಿ ಇರುವಂತಹ ವಿವಿಧ ಕಾಯ್ದೆ ಕಾನೂನುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಇದೆ ವೇಳೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎನ್ ಭಾಗ್ಯಮ್ಮ, ಸಮುದಾಯ ಸಂಘಟನಾಧಿಕಾರಿ ನಾಗರತ್ನಮ್ಮ, ಅಂಗನವಾಡಿ ಶಿಕ್ಷಕಿರಾದ ಆರ್ ಸರಸ್ವತಿ , ವಿ.ನಾಗರತ್ನ, ಶೈಲಾ, ಶೀಲಾ ಬಾಯಿ ಲತಾಬಾಯಿ, ವೀಣಾ, ಅರ್ಚನಾ, ಸೇರಿದಂತೆ ಮುಂತಾದವರು ಇದ್ದರು