ಚಳ್ಳಕೆರೆ : ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್.ಹೆಚ್.ಎಂ) ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸುವAತೆ ಕಳೆದ ಹಲವು ದಿನಗಳಿಂದ ಮುಷ್ಕರ ಮಾಡುತ್ತಿದ್ದರು ರಾಜ್ಯ ಸರಕಾರ ಮಣಿಯುತ್ತಿಲ್ಲ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿಗೆ ಚಳ್ಳಕೆರೆ ಆರೋಗ್ಯ ಇಲಾಕೆಯ ಎನ್.ಹೆಚ್.ಎಂ.ಒಳಗುತ್ತಿಗೆ ನೌಕರರು ಮನವಿ ಸಲ್ಲಿಸಿದರು.
ನಗರದ ಸಾರ್ವಜನಿಕ ಆಸ್ವತ್ರೆಯಲ್ಲಿ ಸ್ಥಳೀಯ ಶಾಸಕರಿಗೆ ಮನವಿ ನೀಡಿದ ಸಿಬ್ಬಂದಿ ನಮ್ಮ ಮುಷ್ಕರಕ್ಕೆ ರಾಜ್ಯ ಸರಕಾರ ಮಣೀಯುತ್ತಿಲ್ಲ 15-20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು ಯಾವುದೇ ಭದ್ರತೆ ಇಲ್ಲ, ಎನ್.ಹೆಚ್.ಎಂ ಅಡಿಯಲ್ಲಿ ಸುಮಾರು 1000ಕ್ಕೂ ಹೆಚ್ಚು ಒಳಗುತ್ತಿಗೆ ನೌಕರರು ಸೇವೆಗೆ ಖಾಯಂಗೊಳಿಸಲು ಆನಿರ್ಧಿಷ್ಟಾವಧಿಯವರೆಗೆ ಮುಷ್ಕರ ನಡೆಸುತ್ತಿದ್ದು, ಸದರಿ ಮುಷ್ಕರಕ್ಕೆ 20 ದಿನಗಳು ಪೂರ್ಣಗೊಳಿಸಿದ್ದು, ಮಣೀಯುತ್ತಿಲ್ಲ ಎಂದು ಮನವಿ ನೀಡಿದರು.