ಆಸ್ವತ್ರೆಯಲ್ಲಿ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಸೂಚನೆ
ರೋಗಿಗಳ ತಪಸಾಣೆ ಸಂಖ್ಯೆ ಹೆಚ್ಚಳ ಮಾಡಿ

ಚಳ್ಳಕೆರೆ : ರಾತ್ರಿ ಪಾಳಿಯದಲ್ಲಿ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಸುಖ ಸುಮ್ಮನೆ ಜಿಲ್ಲಾ ಆಸ್ವತ್ರೆಗೆ ರವಾನಿಸಬೇಡಿ ಎಂದು ಶಾಸಕ ಟಿ.ರಘುಮೂರ್ತಿ ಆಡಳಿತ ವೈಧ್ಯರಿಗೆ ಸೂಚನೆ ನೀಡಿದರು.
ಅವರು ನಗರದ ಸಾರ್ವಜನಿಕರ ಆಸ್ವತ್ರೆಯಲ್ಲಿ ಆರೋಗ್ಯ ಸಮಿತಿ ವತಿಯಿಂದ ಆಯೋಜಿಸಿದ್ದ ಆಸ್ವತ್ರೆಯ ಪೂರ್ವ ಯೋಜಿತ ಯೋಜನೆಗಳಿಗೆ ಅನುಮೊಧನೆ ನೀಡುವ ಹಾಗೂ ಅಭಿವೃದ್ದಿ ವಿಷಯಗಳನೊಳಗೊಂಡ ಸಮಸ್ಯೆಗಳನ್ನೂ ಗಂಭೀರವಾಗಿ ಚರ್ಚೆ ನಡೆಸಿದರು.
ಇನ್ನೂ ಹೊಳ ರೋಗಿ, ಒರ ರೋಗಿ ತಪಸಾಣೆ ಚೀಟಿಯ ಮೊತ್ತ ಹೆಚ್ಚಳದ ವಿಷಯದ ಪ್ರಸ್ತಾಪಸಿದಾಗಿ ಜೂನ್ ತಿಂಗಳಿAದ ಮಾಡಿ ಹೊಸ ಸರಕಾರದ ರೂಪರೇಶಿಗಳನ್ನು ನೋಡಿಕೊಂಡು ಮಾಡಿ ಎಂದರು, ಇನ್ನೂ ನಗರದ ಖಾಸಗಿ ಬಸ್ ನಿಲ್ದಾಣ ಸಮೀಪ ಇರುವುದರಿಂದ ಇಲ್ಲಿನ ಸಾರ್ವಜನಿಕರ ಒಡನಾಟ ಹೆಚ್ಚಾಗಿದೆ ಇನ್ನೂ ಆಸ್ವತ್ರೆಯಲ್ಲಿ ಪೊಲೀಸ್ ಠಾಣೆಯ ಅವಶ್ಯ ಎಂಬ ಮನವಿಗೆ ಕೂಡಲೇ ಶಾಸಕರು ದೂರವಾಣಿ ಕರೆ ಮೂಲಕ ಡಿವೈಎಸ್‌ಪಿ ಗೆ ಸೂಚನೆ ನೀಡಿ ಸಿಬ್ಬಂದಿಯನ್ನು ನೇಮಿಸುವಂತೆ ಸೂಚಿಸಿದರು.
ಈದೇ ಅನೇಕ ವಿಷಯಗಳು ಚರ್ಚೆಯಾದವು.
ಇದೇ ಸಂಧರ್ಭದಲ್ಲಿ ಆಡಳಿತ ವೈಧ್ಯಾಧಿಕಾರಿ ಡಾ.ವೆಂಕಟೇಶ್, ಡಾ.ಆದಿಮನಿ, ಡಾ.ಕಿರಣ್ ಕುಮಾರ್, ಡಾ.ವೆಂಕಟೇಶ್, ಡಾ.ಅಮಿತ್ ಗುಪ್ತ, ಡಾ.ಮಂಜುಪ್ಪ, ಡಾ.ಡಿಸೋಜ್ ,ಡಾ.ಶಾಮಪರಿವಿನ್, ಡಾ.ಮಂಜುಳಾ, ಡಾ.ಸಾಯಿನಾಗ ಜ್ಯೋತಿ, ಎಒ.ಶ್ರೀದೇಚವಿ, ಕಛೇರಿ ಅಧೀಕ್ಷಕರು ಭಾರತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ಇಸ್ಮೈಲ್, ದ್ಯಾಮಣ್ಣ, ರಾಜೇಶ್ವರಿ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಸಹಾಯಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!