ಚಳ್ಳಕೆರೆ : ಮಧ್ಯ ಕರ್ನಾಟಕದ ಆರಾಧ್ಯ ದೈವ ಕಾಯಕ ಯೋಗಿ ಶ್ರೀ ಗುರು ತಿಪ್ಪೆರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ನಾಡಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಆದರೆ ತಮ್ಮ ಭಕ್ತಿಯನ್ನು ಸ್ವಾಮಿಗೆ ಪಾದುಕೆಗೆ ಅರ್ಪಿಸಲು ಕಾತುರರಾಗುತ್ತಾರೆ. ಹಲವು ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿಯನ್ನು ಹರಕೆ ಮೂಲಕ ಸಮರ್ಪಿಸುತ್ತಾರೆ.
ಅಂತಯೇ ಚಳ್ಳಕೆರೆ ತಾಲೂಕಿನ ಭಕ್ತರು ಕಳೆದ ಹಲವು ವರ್ಷಗಳಿಂದ ಸ್ವಾಮೀಯ ದೊಡ್ಡ ರಥೋತ್ಸವದ ದಿನದಂದು ಕಾಲ್ನಡಿಗೆಯ ಮೂಲಕ ತಮ್ಮ ಭಕ್ತಿಯನ್ನು ಸರ್ಮಿಸುತ್ತಾರೆ.
ಇನ್ನೂ ಈ ಕುರಿತು ಯಾತ್ರಾರ್ತ್ರಿ ಕೆ.ಬಿ.ಕೃಷ್ಣೇಗೌಡ್ರು ಮಾತನಾಡಿ, ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ರಥೋತ್ಸವ ನಡೆಯಲಿದ್ದು (ದಕ್ಷಿಣ ಭಾರತದ ಬೃಹತ್ ರಥೋತ್ಸವ)ಈ ಹಿನ್ನೆಲೆಯಲ್ಲಿ ಕಾಯಕವೇ ಕೈಲಾಸ, ಮಾಡಿದಷ್ಟು ನೀಡು ಭಿಕ್ಷೆ. ಎಂಬ ವಿಚಾರವನ್ನು ನೆನೆಯುತ್ತ, ಚಳ್ಳಕೆರೆ ತಾಲ್ಲೂಕಿನಲ್ಲಿ ಮಳೆ ಬೆಳೆ ಹಾಗೂ ಜನತೆಗೆ ಹೆಚ್ಚಿನ ಆರೋಗ್ಯವನ್ನು ಶ್ರೀ ಗುರು ತಿಪ್ಪೇರುದ್ರಸ್ವಾಮಿ ನೀಡಲಿ ಎಂಬ ಆಶಯದೊಂದಿಗೆ ಶುಕ್ರವಾರ ಮುಂಜಾನೆ 5 ಗಂಟೆಗೆ ಚಳ್ಳಕೆರೆ ನಗರದ ಶ್ರೀ ವೀರಭದ್ರಸ್ವಾಮಿ ಸನ್ನಿಧಿಯಿಂದ ನಾಯಕನಹಟ್ಟಿ ದೇವಸ್ಥಾನದವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ, ಈ ಬೃಹತ್ ಪಾದಯಾತ್ರೆಯಲ್ಲಿ ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಿ ಎಂದು ಕೋರಿದರು.

