ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ, 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ. ಹೇಳಿದ್ದಾರೆ.
ಅದರಂತೆ ಇಂದು ನಗರದ ಬಿ ಎಂ ಜಿ ಎಚ್ ಎಸ್ ಪ್ರೌಢಶಾಲಾ ಆವರಣದ ಹಿಂಭಾಗದಲ್ಲಿ ಗಾಂಧಿನಗರ ಬನ್ನಿ ಮಹಾಕಾಳಿ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ನಗರದ 15ನೇ ವಾರ್ಡ್, 22ನೇ ವಾರ್ಡ್ ಹಾಗೂ 23ನೇ ವಾರ್ಡಿನ ಸುಮಾರು ಕಾರ್ಯಕರ್ತರು ಸ್ವಯಂ ಪ್ರೇರಣಿಯಿಂದ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ದೇಶದ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ದುರಾಡಳಿತ ಸುಳ್ಳು ಭರವಸೆ ಗಳಂತಹ ಭರವಸೆಗಳನ್ನು ಕೊಟ್ಟು ಜನಸಾಮಾನ್ಯರಿಗೆ ರಾಷ್ಟ್ರೀಯ ಪಕ್ಷಗಳು ಮೋಸ ಮಾಡಿವೆ ಎಂದು ದೂರಿದರು.
ಇನ್ನೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ ರವೀಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪರಸ್ಪರ ಕಿತ್ತಾಟ ಹಗರಣಗಳ ಸರಮಾಲೆ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಜನರ ಮನಸ್ಸನ್ನು ಕೆಣಕಿದ್ದಾರೆ ಇಂತಹ ವಿಷಪೂರಿತ ಎರಡು ಪಕ್ಷಗಳನ್ನು ಕಿತ್ತುಹಾಕಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಏಕೆಂದರೆ ಈ ಹಿಂದೆ ಕುಮಾರಸ್ವಾಮಿ ಯವರ ಆಡಳಿತದಲ್ಲಿ ಜಾತಿ ನಿಂದನೆಯನ್ನು ತೊರೆದು ಹಾಕಿದ್ದಾರೆ ಲಾಟರಿ ನಿಷೇಧ ಮಾಡಿದ್ದಾರೆ ಈಡೀ ರಾಜ್ಯವನ್ನು ಸುಭಿಕ್ಷೆ ರಾಜ್ಯ ಮಾಡಿದ ಕೀರ್ತಿ ಅವರಿಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಶ್ರೀನಿವಾಸ್, ಪ್ರಮೋದ್, ನಾಗವೇಣಿ, ಕವಿತಾ, ತಿಪ್ಪಕ್ಕ, ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡ ಸಮರ್ಥರಾಯ್ ಭೀಮಣ್ಣ, ಗಾಡಿ ತಿಪ್ಪೇಸ್ವಾಮಿ, ಡಿ.ಚಂದ್ರು, ಬಾಲಣ್ಣ, ವಿಜಯಕುಮಾರ್, ಮನುದೊರೆ ಇನ್ನೂ ಅನೇಕ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು

