ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ರಂಗೇರಿದ್ದು ಮೂರು ಪಕ್ಷಗಳಿಂದ ಅಭ್ಯರ್ಥಿಗಳು ಭರ್ಜರಿಯಾಗಿ ತಾಲೀಮು ನಡೆಸುತ್ತಿದ್ದಾರೆ.
ಅದರಂತೆ ಸ್ಥಳೀಯ ಕಾಂಗ್ರೇಸ್ ಪಕ್ಷದ ಹಾಲಿ ಶಾಸಕ ಟಿ.ರಘುಮೂರ್ತಿ ಕಳೆದ ಹತ್ತು ವರ್ಷಗಳಿಂದ ಮತದಾರರ ಒಡನಾಟ ಬೆಳೆಸುತ್ತಾ, ಮೂರನೇ ಬಾರಿಗೆ ಶಾಸಕ ನಾಗಲು ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.
ಅದರಂತೆ ಕ್ಷೇತ್ರದ 140 ಹಳ್ಳಿಗಳ ಮತದಾರರನ್ನು ಬೇಟಿ ಮಾಡುವ ಮೂಲಕ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ತರಲು ಮತದಾರರ ಓಲೈಕೆ ನಡೆಯುತ್ತಿದೆ.
ಇನ್ನೂ ಅದರಂತೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ ತಿಪ್ಪೇಸ್ವಾಮಿ ಕ್ಷೇತ್ರದ ಬೊಮ್ಮನಕುಂಟೆ ಗ್ರಾಮದಲ್ಲಿ ನಡೆದ ಸುಕ್ಷೇತ್ರ ಶ್ರೀ ಓಬಳನರಸಿಂಹ ಸ್ವಾಮಿ ದೇವರ ಗುಗ್ಗರಿ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ, ಸ್ವಾಮೀಯ ಆಶೀರ್ವಾದ ಪಡೆದರು.
ಹಾಗೂ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಕೂಡ ಕ್ಷೇತ್ರವನ್ನು ಬಿಡದೆ ಈಡೀ ದಿನವೆಲ್ಲಾ ಮತದಾರರ ಮನೆಯಲ್ಲಿ ಬೀಡು ಬಿಟ್ಟಿದ್ದಾರೆ ಅದರಂತೆ ತಾಲೂಕಿನ ಪರಶುರಾಮಪುರ ಗ್ರಾಮದಲ್ಲಿ ಹಾಲುಮತ ಮಹಾಸಭಾ ವತಿಯಿಂದ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

