ಚಳ್ಳಕೆರೆ : ರೇಷ್ಮೆ ನಗರಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಾಕೀಯ ರಂಗೇರಿದ್ದು ಕಾಂಗ್ರೇಸ್ ಗೆಲುವಿಗೆ ಕಂಕಣ ಬದ್ದರಾರ ಕೈ ಪಡೆಯ ಯುವಕರು ಈಡೀ ಕ್ಷೇತ್ರದಲಿ ಕೈಗೆ ಬಲಪಡಿಸುತ್ತಿದ್ದಾರೆ.
ಅದರೆ ಕಳೆದ 2018ರಲ್ಲಿ ಸೊಲನುಂಡ ಡಾ.ಬಿ.ಯೋಗೇಶ್ ಬಾಬು ರವರು ಈ ಬಾರಿ ಗೆಲ್ಲುವ ನೀರಿಕ್ಷೆ ಇಟ್ಟುಕೊಂಡು ಈಡೀ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ.
ಅದರಂತೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಘಟಪರ್ತಿ ಪಂಚಾಯಿತಿಯ ಮಾರಮ್ಮನಹಳ್ಳಿ(ಹೊರಕಾಲೇವು) ಗ್ರಾಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗಳನ್ನು ಮನೆ ಮನೆಗೆ ವಿತರಿಸಿ ಮಾತನಾಡಿದ ಡಾ.ಬವಿ.ಯೋಗೇಶ್ ಬಾಬು, ಮುಂಬರುವ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್, ಅನ್ನ ಭಾಗ್ಯ ಕುಟುಂಬದ ಪ್ರತಿ ಸದಸ್ಯರಿಗೆ ಉಚಿತ 10ಕೆಜಿ ಅಕ್ಕಿ, ಇತರೆ ಹಲವು ಯೋಜನೆಗಳನ್ನು ಮತದಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಚಂದ್ರಣ್ಣ, ಮಾಜಿ ತಾಲೂಕು ಪಂಚಾಯತಿ ಸದಸ್ಯರು, ಘಟಪರ್ತಿ ವೀರಭದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯರು, ಗೋಪಾಲಯ್ಯ ಗ್ರಾಮ ಪಂಚಾಯತಿ ಸದಸ್ಯರು, ಡಿ.ಬಿ. ತಿಪ್ಪೇಸ್ವಾಮಿ, ವಿಶ್ವನಾಥ್‌ರೆಡ್ಡಿ, ಬಸವರೆಡ್ಡಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರು ನಿರಂಜನ್‌ರೆಡ್ಡಿ, ಮಾರಮ್ಮನಹಳ್ಳಿ ಬಸವರಾಜು ಹಾಗು ಮಾರಮ್ಮನಹಳ್ಳಿ ಸ್ಥಳೀಯ ಮಹಿಳೆಯರು ಮತ್ತು ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

