ಚಳ್ಳಕೆರೆ : ಕೇಂದ್ರ ಮತ್ತು ರಾಜ್ಯ ಸಕಾರದ ಬೆಲೆ ಏರಿಕೆ ಖಂಡಿಸಿ ಇಂದು ಚಳ್ಳಕೆರೆ ನಗರದಲ್ಲಿ ಕಾಂಗ್ರೇಸ್ ಪಕ್ಷದಿಂದ ಪ್ರತಿಭಟನೆ ಮಾಡಲಾಯಿತು.
ನಗರದ ಶಾಸಕರ ಭವನದಿಂದ ಬ್ಲಾಕ್ ಕಾಂಗ್ರೇಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಬಿಜೆಪಿ ದುರಾಡಳಿತದ ಬಗ್ಗೆ ಅಕ್ರೋಶ ವ್ಯಕ್ತ ಪಡಿಸಿ ಕೆಲ ಕಾಲ ಘೋಷಣೆಗಳನ್ನು ಕೂಗಿ ಮನವಿ ಸಲ್ಲಿಸಿದರು.
ಇನ್ನೂ ಪ್ರತಿಟನೆಯುದ್ದಕ್ಕೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತಲೆ ಮೇಲೆ ಗ್ಯಾಸ್ ಸಿಲೆಂಡರ್ ಒತ್ತು ಗ್ಯಾಸ್ ಬೆಲೆ ಹೆಚ್ಚಗಿರುವ ಬಗ್ಗೆ ವಿನೂತನ ಪ್ರತಿಭಟನೆ ನಡೆಸಿದರು.
ಇನ್ನೂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ ಮಾತನಾಡಿ, ಡಬಲ್ ಇಂಜಿನ್ ಸರಕಾರ ಎಂದು ಹೇಳುವ ಸರಕಾರ ಜನರ ಹೊಟ್ಟೆ ಮೇಲೆ ಒರೆಯುತ್ತಿದೆ, ಈಗೀರುವ ಗ್ಯಾಸ್ ಬೆಲೆಯೇ ಹೊರೆ ಹಾಗಿದೆ ಮತ್ತೊಂದೆಡೆ ಬೆಲೆ ಹೆಚ್ಚಳ ಮಾಡಿ ಜನರಿಗೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು..
ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಬಾಯಿ ಮಾತನಾಡಿ, ಈ ಸರಕಾರಗಳು ಜನರ ಬದುಕನ್ನು ಕಸಿದುಕೊಂಡಿದೆ, ಇಂತಹ ಸರಕಾರಗಳನ್ನು ನಾವು ಹೊಡೆದೊಡಿಸಬೇಕು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಳಿಸಬೇಕಾಗುತ್ತದೆ, ಜನರ ದಿನ ನಿತ್ಯದ ದಿನಸಿ ವಸ್ತುಗಳ ಮೇಲೆ ದುಬಾರಿ ಮಾಡಿ ಕೂಲಿ ಕಾರ್ಮಿಕರು, ಬಡವರ್ಗದ ಜನರು ಜೀವನ ಮಾಡುವುದೇ ದುಸ್ಥರವಾಗಿದೆ ಎಂದು ಕಿಡಿಕಾರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ. ಶಶಿಧರ್ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ. ಕಿರಣ್ ಶಂಕರ್. ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್‌ಸ್ವಾಮಿ, ನಾಗರಾಜ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾಬಾಯಿ, ಸೇವಾದಳ ಅಧ್ಯಕ್ಷ ತಿಪ್ಪೇಸ್ವಾಮಿ, ಚೌಳೂರು ಪ್ರಕಾಶ್, ನಗರಸಭಾ ಸದಸ್ಯರುಗಳಾದ ಮಲ್ಲಿಕಾರ್ಜುನ್, ವಿರುಪಾಕ್ಷಪ್ಪ, ಬೋರಯ್ಯ, ಆಯ್ಕಲ್ ಪ್ರಕಾಶ್, ಕೃಷ್ಣಮೂರ್ತಿ, ಅನ್ವರ್‌ಮಾಸ್ಟರ್, ದಳವಾಯಿಮೂರ್ತಿ ಪಾಪಣ್ಣ, ಸೈಯದ್, ಹನುಮಂತಪ್ಪ, ಸೈಫ್‌ಉಲ್ಲಾ ಮಂಜುನಾಥ್, ಶಂಸದ್‌ಬಾನು, ಬಸವರಾಜ್, ಮಂಜುನಾಥ್ ಇಸ್ಮಾಯಿಲ್, ಶಿವಸ್ವಾಮಿ, ಹಳೆಟೌನ್ ಬದ್ರಿ, ವಿವಿಧ ಘಟಕಗಳ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದ್ದರು.