ಚಳ್ಳಕೆರೆ : ಚುನಾವಣೆಗೆ ಕೇವಲ ಇನ್ನೂ ಎರಡು ಮೂರು ತಿಂಗಳ ಬಾಕಿ ಇರುವಾಗಲೆ ಮತಗಟ್ಟೆ ಸಿದ್ದತೆ ಭರ್ಜರಿಯಾಗಿ ನಡೆಯುತ್ತಿದೆ
ಅದರಂತೆ ಚಳ್ಳಕೆರೆ ತಾಲೂಕಿನಲ್ಲಿ ಈಗಾಗಲೇ 259 ಮತಗಟ್ಟೆಗಳನ್ನು ಪರೀಶೀಲಿಸಿದ ಚುನಾವಣೆ ಅಧಿಕಾರಿ ಆನಂದ್ ರವರು ಸೂಕ್ಷö್ಮ ಹಾಗೂ ಅತೀ ಸೂಕ್ಷö್ಮ ಮತಗಟ್ಟೆಗಳನ್ನು ಪರೀಶಿಲಿಸಿ ಮೂಲಭೂತ ಸೌಲಭ್ಯಗಳನ್ನು ಇರುವಾಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ತಾಲೂಕಿನ ಹಲವು ಮತಗಟ್ಟೆ ಹಾಗೂ ನಗರದಲ್ಲಿ ಇರುವ ಸು.48 ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಬೆಳಕಿನ ವ್ಯವಸ್ಥೆ, ಮತಗಟ್ಟೆಯ ಕಿಟಕಿ, ಬಾಗಿಲು, ಈಗೇ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಿಕಲಚೇತನರಿಗೆ ರ‍್ಯಾಂಪ್, ಮೆಟ್ಟಿಲಿನ ವ್ಯವಸ್ಥೆ ಸೇರಿದಂತೆ ಈಗಾಗಲೆ ಚುನಾವಣೆ ಆಯೋಗ ತಿಳಿಸಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಮತಗಟ್ಟೆಗಳನ್ನು ಸುವ್ಯವಸ್ಥಿತವಾಗಿಟ್ಟು ಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಾಮಕೃಷ್ಣ ಎಪ್ ಸಿದ್ದನ ಕೊಳ್ಳ, ತಹಶೀಲ್ದಾರ್ ರೇಹಾನ್ ಪಾಷ್, ಶಿಕ್ಷಕ ಶ್ರೀಧರ್, ಚುನಾವಣೆ ಶಾಖೆಯ ಪ್ರಕಾಶ್, ಓಬಳೇಶ್, ಮತಗಟ್ಟೆ ಅಧಿಕಾರಿಗಳು. ಮುಖ್ಯ ಶಿಕ್ಷಕರು. ಗ್ರಾಪಂ ಅಧಿಕಾರಿಗಳು ಉಪಸ್ಥಿತರಿದ್ದರು.