ಚಳ್ಳಕೆರೆ : ರೇಷ್ಮೆ ನಗರಿ ಮೊಳಕಾಲ್ಮೂರಿನಲ್ಲಿ ರಾಜಕೀಯ ರಂಗೇರಿದ್ದು ದಿನದಿಂದ ದಿನಕ್ಕೆ ಚುನಾವಣೆ ಕಾವು ಹೊಸ ತಿರುವು ಪಡೆಯುತ್ತಿದೆ.
ಅದರಂತೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಜಕೀಯ ಹೊಸ ಆಯಾಮಗಳನ್ನು ಕಾಣಬಹುದು.

ಇನ್ನೂ ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದು ಮಾಮೂಲು ಅದರಂತೆ
2013 ರಲ್ಲಿ ಬಿಜೆಪಿಯಿಂದ ಗೆದ್ದು ತನ್ನ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ರವರು ಕಳೆದ 2018 ರಲ್ಲಿ ಕ್ಷೇತ್ರಕ್ಕೆ ಶ್ರೀರಾಮುಲು ಆಗಮನದಿಂದ ಟಿಕೆಟ್ ಕೈ ತಪ್ಪಿದ್ದರಿಂದ ಅನಿವಾರ್ಯವಾಗಿ ಕಾಂಗ್ರೆಸ್ ಬಾಗಿಲು ತಟ್ಟಿದ್ದರು..ಅದರಂತೆ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದುಡಿದರೆ ಬದಲಾದ ರಾಜಕೀಯ ಚದುರಂಗದಾಟದಲ್ಲಿ ಮತ್ತೆ ಮೂಲ ಪಕ್ಷ ಬಿಜೆಪಿಗೆ ಸೆರ್ಪಡೆಯಾಗುವ ಮೂಲಕ ತಮ್ಮ ಅಧಿಪತ್ಯ ನಡೆಸುವರು.

ಅದರಂತೆ ಇಂದು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು, ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಎಂ ಎಲ್ ಸಿ.ಕೆಎಸ್ .ನವೀನ್ , ಹಾಗೂ ಮಂಡಲ ಅದ್ಯಕ್ಷರು, ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಜೆಪಿ ಬಾವುಟ ಹಿಡಿಯಲಿದ್ದಾರೆ.

ಅದರಂತೆ ಮೊದಲಿಗೆ ನಾಯಕನಹಟ್ಟಿ ಶ್ರೀ ಗುರುತಿಪ್ಪೆರುದ್ರಸ್ವಾಮಿ ಸನ್ನಿದಿಯಲ್ಲಿ ಬಿಜೆಪಿ ನಾಯಕರ ಜೊತೆಗೆ ದೇವರ ಆರ್ಶಿವಾದ ಪಡೆದು ನಂತರ ಬಿಜೆಪಿ ಕಾರ್ಯಲಾಯದಲ್ಲಿ ಬಾವುಟ ಹಿಡಿದ ನಂತರ ಸ್ವ ಗ್ರಾಮದ ನೇರ್ಲಗುಂಟೆ ಮನೆಯಲ್ಲಿ ಪ್ರಮುಖ ‌ಮುಖಂಡರ ಜೊತೆ ರಾಜಕೀಯ ಚರ್ಚೆ ನಡೆಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

About The Author

Namma Challakere Local News
error: Content is protected !!