ಚಳ್ಳಕೆರೆ : ಹಿಂದೂ ಮುಸ್ಮಿಂ ಸ್ನೇಹ ಬಾಂಧವ್ಯದ ಸಂಕೇತವಾದ ಖಾವಲಿ, ಉರ್ಸ್ ಹಬ್ಬ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ತೆರೆಕಂಡಿತು.
ಹೌದು ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ಸೈಯದ್ ಹಜರತ್ ಗರೀಬ್ ಕ್ಷಾವಲಿ ದರ್ಗಾ ಆವರಣದಲ್ಲಿ ಸಾವಿರಾರು ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೇರಿ ಮಾಡುವ ಸ್ನೇಹ ಸಂಕೇತದ ಈ ಉರುಸ್ ಹಿಮ್ಮಡಿಗೊಂಡಿದೆ.
ಅದರAತೆ ಕಳೆದ ಎರಡು ದಿನಗಳಿಂದ ಗರೀಬ್ ಸಾಬ್ ದರ್ಗಾವನ್ನು ವಿವಿಧ ವಿದ್ಯುತ್ ದೀಪ ಅಲಂಕಾರಗಳಿAದ ಮಾಡಿದ ಮುಸ್ಲಿಂ ಬಾಂಧವರು, ಮೊದಲ ದಿನ ಶ್ರೀಗಂಧವನ್ನು ನಗರದ ವಿವಿಧ ರಾಜ ಬೀದಿಗಳಲ್ಲಿ ಮೆರವಣೆಗೆ ಮಾಡುವ ಮೂಲಕ ಉರುಸ್‌ಗೆ ಅರ್ಪೀಸಿದರು. ನಂತರ ಖಾವಲಿ ಆರಂಭವಾದ ನಂತರ ಸ್ಥಳೀಯ ಶಾಸಕ ಟಿ.ರಘುಮೂರ್ತಿ, ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್, ಈಗೇ ವಿವಿಧ ರಾಜಾಕೀಯ ನೇತಾರರು ಹಿಂದೂ ಮುಸ್ಲಿಂ ಬಾಂಧವರು ಸೇರಿ ಸಡಗರ ಸಂಭ್ರಮದಿAದ ಆಚರಿಸಿದರು.
ಇದೇ ಸಂಧರ್ಭದಲ್ಲಿ ನಗರಂಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡರಾ ಟಿಎಟಿ.ಪ್ರಭುದೇವ್,ಎಚ್‌ಎಸ್ ಸೈಯದ್, ಸಲೀಂ, ಅನ್ವರ್ ಮಾಸ್ಟರ್, ಓಬಣ್ಣ, ನಯಾಜ್, ಮುಜೀಬ್, ಹಿದಾಯತುಲ್ಲಾ, ರವಿ, ಓಬಣ್ಣ, ಇತರ ಮುಖಂಡರು, ಕಾರ್ಯಕರ್ತರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.

Namma Challakere Local News
error: Content is protected !!